More

    ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿಕೆ, ಸರ್ಕಾರದಿಂದ ಮಾರ್ಗಸೂಚಿ ಸಡಿಲಿಕೆ, ಗಣೇಶೋತ್ಸವದಲ್ಲಿ ಕ್ರೆಡಿಟ್ ರಾಜಕಾರಣ ಬೇಡ !

    ವಿಜಯಪುರ: ಸಾರ್ವತ್ರಿಕ ಗಣೇಶ ಪ್ರತಿಷ್ಟಾಪನೆಗೆ ಸರ್ಕಾರ ಅವಕಾಶ ಕಲ್ಪಿಸಿದ್ದು ಇದಕ್ಕೆ
    ಜಿಲ್ಲೆಯ ಮಹಾಮಂಡಳದ ಪರಿಶ್ರಮವೇ ಕಾರಣ‌. ಆದರೆ ಕೆಲವರು ಇದರ ಕ್ರೆಡಿಟ್ ಗೆ ಬಡಿದಾಡುತ್ತಿದ್ದಾರೆ ಎಂದು
    ಮಾಜಿ ಸಚಿವ ಹಾಗೂ ಗಜಾನನ ಮಹಾಮಂಡಳದ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
    ಕಳೆದ ಆರು ತಿಂಗಳಿನಿಂದಲೇ ಮಹಾಮಂಡಳ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸಿತ್ತು. ಉತ್ಸವದ ಮೇಲೆ ನಿರ್ಬಂಧ ವಿಧಿಸದಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದ ಫಲವಾಗಿ ಇಂದು ಸರ್ಕಾರ ಸಮ್ಮತಿ ಸೂಚಿಸಿದೆ. ನಾವು ಮಾಡಿದ ಪ್ರಯತ್ನ ದ ಫಲವಾಗಿ ರಾಜ್ಯಾದ್ಯಂತ ಗಣೇಶೋತ್ಸವ ಕ್ಕೆ ಅವಕಾಶ ಸಿಕ್ಕಂತಾಗಿದೆ. ಆದರೆ, ಇದನ್ನೇ ಕೆಲವರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದು ಇದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ನನಗೂ ಸಿಎಂ ಫೋನ್ ನಲ್ಲಿ ಮಾತನಾಡುತ್ತಾರೆ. ನಮ್ಮ ಪಕ್ಷದವರೆಡ ಸಿಎಂ ಇದ್ದಾರೆ. ಮಾತಾಡೋದು ಸಹಜ. ಗಣೇಶೋತ್ಸವ ಆಚರಣೆಗೆ ಮನವಿ ಸಲ್ಲಿಸಿದ್ದೇ ಮೊದಲು ನಾನು. ಹಾಗೆಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲವರಿಗೆ ಅದೊಂದು ಪ್ರಚಾರದ ವಸ್ತು. ಸಿಎಂ ಮಾತನಾಡಿದ್ದಾರೆಂದು ಹೇಳಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವಷ್ಟು ಕೆಳಮಟ್ಟಕ್ಕೆ ನಾನು ಇಳಿದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಪರೋಕ್ಷವಾಗಿ ಟಾಂಗ್ ನೀಡಿದರು.
    ಸರ್ಕಾರ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ಮಾಧ್ಯಮದ ಪಾತ್ರವೂ ಪ್ರಮುಖವಾಗಿದೆ. ಪ್ರಮೋದ ಮುತಾಲಿಕ, ಅಭಯ ಪಾಟೀಲ ಮುಂತಾದ ನಾಯಕರ ಒತ್ತಡದ ಫಲವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಸಿಕ್ಕಿತು. ಆದರೆ, ಅಭಿಯಾನ ಆರಂಭವಾಗಿದ್ದು ಮಾತ್ರ ವಿಜಯಪುರ ದಿಂದ ಎಂದರು.

    ಒಂಭತ್ತು ದಿನಗಳ ಕಾಲ ಮಹಾಮಂಡಳದ ಗಣೇಶ ಪ್ರತಿಷ್ಟಾಪಿಸಲಾಗುತ್ತಿದ್ದು ಈ ಬಾರಿ “ನಮ್ಮ ಉತ್ಸವ ನಮ್ಮ ಗಣಪ” ಘೋಷವಾಕ್ಯದೊಂದಿಗೆ ಉತ್ಸವ ನೆರವೇರಲಿದೆ ಎಂದರು.
    ಪ್ರತೀ ವರ್ಷ ಒಂದಿಲ್ಲಾ ಒಂದು ಉಪಯುಕ್ತ ಕಾರ್ಯಕ್ರಮಗಳ ಮೂಲಕ ಉತ್ಸವ ಆಚರಿಸಲಾಗುತ್ತಿದ್ದು ಕಳೆದ ಬಾರಿ 10 ಸಾವಿರ ಸಸಿ ಹಂಚಲಾಗಿತ್ತು. ಸಾವಯವ ಕೃಷಿಕರಿಗೆ, ಪೌರ ಕಾರ್ಮಿಕರಿಗೆ, ಪರಿಸರ ಸಂರಕ್ಷಕರಿಗೆ ಪ್ರಶಸ್ತಿ ನೀಡುತ್ತಾ ಬರಲಾಗಿದೆ.
    ಈ ಬಾರಿ ಜನಸಂಘದಲ್ಲಿ ಸೇವೆ ಸಲ್ಲಿಸಿದ್ದ ಡಾ.ಮಹೇಂದ್ರಕರ ಅವರ ಹೆಸರಿನಲ್ಲಿ ಸಮಾಜ ಮುಖಿ ಕಾರ್ಯನಿರ್ವಹಿಸಿದವರಿಗೆ ಪ್ರಶಸ್ತಿ ಹಾಗೂ ಸನ್ಮಾನ ನೀಡಲಾಗುವುದು ಎಂದರು.
    ಮಣ್ಣಿನ ಗಣೇಶ ಪ್ರತಿಷ್ಟಾಪನೆಗೆ ಆದ್ಯತೆ ನೀಡಲಾಗಿದೆ. ಫೈಬರ್ ಗಣೇಶ ಪ್ರತಿಷ್ಟಾಪಿಸಿದವರು ಅದನ್ನು ವಿಸರ್ಜನೆ ಮಾಡದೆ ಸಾಂಕೇತಿಕವಾಗಿ ಮಣ್ಣಿನ ಗಣೇಶನನ್ನು ವಿಸರ್ಜನೆ ಮಾಡಲಿದ್ದಾರೆ. ಆ ಮೂಲಕ ಪರಿಸರ ಸ್ನೇಹಿಯಾಗಿ ಗಣೇಶ ಉತ್ಸವ ಆಚರಿಸಲಾಗುವುದು ಎಂದರು.
    ಶಿವಾನಂದ ಮಾನಕರ, ಪ್ರಭಾಕರ ಬೋಸ್ಲೆ
    ಸತೀಶ ಪಾಟೀಲ, ಭರತ ಕೋಳಿ, ವಿಜಯ ಜೋಷಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts