More

    ಮಾಜಿ ಕಾರ್ಪೋರೇಟರ್ ಪತಿ ವಾರಾಣಸಿಯಲ್ಲಿ ಪತ್ತೆ, ಉತ್ತರ ಪ್ರದೇಶಕ್ಕೆ ತೆರಳಿದ ನಂದಗುಡಿ ಪೊಲೀಸ್ ತಂಡ

    ಹೊಸಕೋಟೆ: ತಾಲೂಕಿನ ಚಿಂತಾಮಣಿ ರಸ್ತೆಯಲ್ಲಿ ಮಾ.27ರಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಪತಿ ನಾಪತ್ತೆ ಪ್ರಕರಣಕ್ಕೆ ಬುಧವಾರ ತಿರುವು ಸಿಕ್ಕಿದ್ದು, ನಾಪತ್ತೆಯಾಗಿದ್ದಾತ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪತ್ತೆಯಾಗಿದ್ದಾರೆ.

    ಕೆ.ಪಿ. ಅಗ್ರಹಾರದ ನಿವಾಸಿ ಲೋಹಿತ್ (36) ನಿಗೂಢವಾಗಿ ನಾಪತ್ತೆಯಾಗಿದ್ದವರು. ಇವರನ್ನು ಅಪಹರಿಸಿರುವುದಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ರಂಗಸ್ವಾಮಿ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ಮುಂದಾಗಿದ್ದ ಪೊಲೀಸರ ತಂಡ ಲೋಹಿತ್, ವಾರಾಣಸಿಯಲ್ಲಿ ಇರುವುದನ್ನು ಪತ್ತೆ ಮಾಡಿದೆ.

    ಸಾಲಗಾರರ ಕಾಟ ಕಾರಣ?: ನಂದಗುಡಿ ಹೋಬಳಿಯ ಹಳೆವೂರು ಗ್ರಾಮದಲ್ಲಿ ಲೋಹಿತ್ 6 ಎಕರೆ ಭೂಮಿ ಖರೀದಿಸಿದ್ದರು. ಅದರಲ್ಲಿ ಬೈಕ್ ರೇಸ್ ಟ್ರ್ಯಾಕ್ ನಿರ್ಮಿಸಿದ್ದಲ್ಲದೆ, ಇತರ ಕ್ರೀಡಾ ಚಟುವಟಿಕೆಯ ಸೌಲಭ್ಯ ಕಲ್ಪಿಸಿದ್ದರು. ಇದಕ್ಕಾಗಿ ಹಲವರಿಂದ ಭಾರಿ ಮೊತ್ತದ ಸಾಲ ಪಡೆದಿದ್ದರು. ಸಾಲ ಹಿಂದಿರುಗಿಸುವಂತೆ ಸಾಲಗಾರರು ಪೀಡಿಸಲಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೊಬೈಲ್‌ೆನ್ ಆ್ ಮಾಡಿಕೊಂಡು, ಅಪಹರಣಕ್ಕೆ ಒಳಗಾದವರಂತೆ ನಾಟಕ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಹಳೇವೂರು ಬಳಿ ಕಾರು: ಬೈಕ್ ರೇಸ್ ಟ್ರ್ಯಾಕ್‌ನ ಉದ್ಯೋಗಿಗಳಿಗೆ ವೇತನ ಪಾವತಿಸಲೆಂದು ಲಕ್ಷಾಂತರ ರೂಪಾಯಿ ನಗದು ತೆಗೆದುಕೊಂಡು ಮಾ.27ರಂದು ಲೋಹಿತ್ ಹಳೆವೂರಿಗೆ ತೆರಳುತ್ತಿದ್ದರು. ನಂದಗುಡಿ ಹಾಗೂ ಹಳೆವೂರು ಮಧ್ಯೆ ಕಾರು ನಿಲ್ಲಿಸಿದ್ದ ಲೋಹಿತ್, ಕಾರು ಪಂಕ್ಚರ್ ಆಗಿರುವುದಾಗಿ ಕುಟುಂಬದವರಿಗೆ ತಿಳಿಸಿದ್ದರು. ಆದರೆ, ತಡರಾತ್ರಿಯಾದರೂ ಬೈಕ್ ರೇಸ್ ಟ್ರ್ಯಾಕ್ ಅನ್ನು ಲೋಹಿತ್ ತಲುಪದ ಹಿನ್ನೆಲೆಯಲ್ಲಿ ರೇಸ್ ಟ್ರ್ಯಾಕ್‌ನ ಸಿಬ್ಬಂದಿ ಲೋಹಿತ್‌ಗಾಗಿ ಹುಡುಕಾಟ ಆರಂಭಿಸಿದ್ದರು. ಹಳೆವೂರು ಸಮೀಪದಲ್ಲೇ ಲೋಹಿತ್ ತೆರಳುತ್ತಿದ್ದ ಕಾರು ಪಂಕ್ಚರ್ ಆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜತೆಗೆ ಕಾರಿನ ಒಳಭಾಗದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದವು. ಇದರಿಂದಾಗಿ ಲೋಹಿತ್ ಅವರ ಸುರಕ್ಷತೆ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದ್ದವು.

    ಸದ್ಯ ಲೋಹಿತ್ ಅವರನ್ನು ವಾರಾಣಸಿಯಿಂದ ಬೆಂಗಳೂರಿಗೆ ಮರಳಿ ಕರೆತರುವ ಪ್ರಕ್ರಿಯೆ ನಡೆದಿರುವುದಾಗಿ ನಂದಗುಡಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts