More

    ಮಾಂಜ್ರಾ ನದಿ ನೀರು 22.37 ಟಿಎಂಸಿ ಬಳಸಿ

    ಕಮಲನಗರ(ಗ್ರಾ): ನೀರಾವರಿ, ಕುಡಿಯುವ ನೀರು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಬೀದರ್ ಜಿಲ್ಲೆಗೆ ಹಂಚಿಕೆಯಾದ 22.37 ಟಿಎಂಸಿ ನೀರು ಸಂಪೂರ್ಣ ಬಳಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಒತ್ತಾಯಿಸಿದ್ದಾರೆ.

    ಸಂಗಮ ಗ್ರಾಮದಿಂದ ಶನಿವಾರ ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಯಾತ್ರೆ ರಥಕ್ಕೆ ಚಾಲನೆ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ಗೋದಾವರಿ ಜಲಾನಯನದಲ್ಲಿ ಹರಿಯುವ ಮಾಂಜ್ರಾದಿಂದ ಜಿಲ್ಲೆಗೆ 22.37 ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. ಆದರೆ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಬಳಕೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿದ್ದಾರೆ.

    ಜಿಲ್ಲೆಯ ಪಾಲಿನ ನೀರು ಬಳಕೆಗೆ ಗೋದಾವರಿ ಜಲಾನಯನ ಪ್ರದೇಶಾಭಿವೃದ್ಧಿ ಮಂಡಳಿ ರಚನೆ ಸಂಬಂಧ ನಿರಂತರ ಹೋರಾಟ ನಡೆದಿದೆ. ತಕ್ಷಣ ಮಂಡಳಿ ರಚಿಸಿ ಜಿಲ್ಲೆ ಪಾಲಿನ ನೀರು ಬಳಕೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ 22.37 ಟಿಎಂಸಿ ನೀರು ಸಂಪೂರ್ಣ ಬಳಸಿಕೊಳ್ಳುವ ಭರವಸೆ ತಮ್ಮ ಪಕ್ಷದಿಂದ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಇದಕ್ಕೆ ಸ್ಪಂದಿಸಿದ ಶಾಸಕ ಖಾಶೆಂಪುರ, ಬೀದರ್ ಜಿಲ್ಲೆಗೆ ಹಂಚಿಕೆಯಾದ ನೀರು ಬಳಕೊಳ್ಳುವಲ್ಲಿ ಸಕರ್ಾರ ವಿಫಲವಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಈ ನೀರು ಬಳಸಿಕೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts