More

    ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸ್ವ ಉದ್ಯೋಗ ಸಹಕಾರಿ

    ಬನ್ನಿಕುಪ್ಪೆ: ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾದರೆ ಸ್ವ ಉದ್ಯೋಗ ಸಹಕಾರಿಯಾಗಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ಅಭಿಪ್ರಾಯಪಟ್ಟರು.


    ಯೋಜನೆಯ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ಬನ್ನಿಕುಪ್ಪೆಯ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸ್ವ ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.


    ಧರ್ಮಸ್ಥಳ ಸಂಸ್ಥೆ ಮಹಿಳೆಯರಿಗೆ ಪೂರಕವಾದ ತರಬೇತಿಗಳನ್ನು ನೀಡಿ ಅವರನ್ನು ಸಬಲರನ್ನಾಗಿ ಮಾಡುತ್ತಿದೆ ಎಂದರು.


    ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಉಪನ್ಯಾಸಕಿ ಶ್ವೇತಾ ಮಾತನಾಡಿ, ಬಿಡುವಿನ ಸಮಯದಲ್ಲಿ ಮಹಿಳೆಯರು ಮನೆಯಲ್ಲೇ ಕುಳಿತು ಸ್ವ ಉದ್ಯೋಗ ಮಾಡಬಹುದು. ಅದಕ್ಕೆ ಪೂರಕವಾದ ತರಬೇತಿಗಳನ್ನು ಸಂಸ್ಥೆ ನೀಡುತ್ತದೆ. ಟೈಲರಿಂಗ್ ತರಬೇತಿ, ಬ್ಯೂಟಿಷಿಯನ್, ಪೇಪರ್ ಬ್ಯಾಗ್ ತಯಾರಿ, ಎಂಬ್ರಾಯ್ಡರಿ, ಸ್ಯಾರಿಗೆ ಕುಚ್ ಹಾಕುವುದು ಮುಂತಾದ ತರಬೇತಿಗಳನ್ನು ಪಡೆಯಬಹುದೆಂದು ಮಾಹಿತಿ ನೀಡಿದರು.


    ಉಷಾ ಟೈಲರಿಂಗ್ ಕಂಪನಿಯ ಪ್ರಬಂಧಕ ಗಿರೀಶ್ ಅವರು ಟೈಲರಿಂಗ್ ಮಷಿನ್‌ಗಳ ಬಗ್ಗೆ ಮಾಹಿತಿ ನೀಡಿದರು.
    ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ್ ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ಮೂಲಕ ಟೈಲರಿಂಗ್ ಮಿಷನ್‌ಗಳನ್ನು ಕಡಿಮೆ ದರದಲ್ಲಿ ನೀಡುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.


    ಆರೋಗ್ಯ ರಕ್ಷಾ ವಿಮೆಯಲ್ಲಿ 20,000 ರೂ.ಚೆಕ್ ವಿತರಣೆ ಮಾಡಲಾಯಿತು. ಮಂಜೂಷ ನೂತನ ಸ್ವ ಸಹಾಯ ಸಂಘದ ಉದ್ಘಾಟನೆ ಹಾಗೂ ಸದಸ್ಯರಿಗೆ ತಿಂಗಳಿಗೆ 750 ರೂ.ಮಾಸಾಶನ ನೀಡುತ್ತಿದ್ದು, ಮಾಸಾಶನ ವಿತರಣಾ ಕೈಪಿಡಿ ವಿತರಿಸಲಾಯಿತು.


    ಯಜಮಾನರಾದ ಶಿವಣ್ಣ, ಚೆಲುವಯ್ಯ, ಯೋಜನಾಧಿಕಾರಿ ಬಿ.ಧನಂಜಯ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರುತಿ, ವಲಯ ಮೇಲ್ವಿಚಾರಕಿ ರೇಖಾ, ಕಿಶನ್ ಎಂಟರ್‌ಪ್ರೈಸಸ್‌ನ ದೇವಾನಂದ, ಎಂಬ್ರಾಯ್ಡರಿ ಮಿಷನ್‌ನ ಪ್ರಬಂಧಕ ಶ್ಯಾಮ್‌ಸನ್, ಸೇವಾ ಪ್ರತಿನಿಧಿಗಳು, ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts