More

    ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲಿ


    ಯಾದಗಿರಿ: ಆಧುನಿಕರಣದ ಇಂದಿನ ದಿನಗಳಲ್ಲಿ ಮಹಿಳೆ ಪುರುಷನಿಗಿಂತ ಹೆಚ್ಚು ಸಾಧನೆ ಮೆರೆಯುತ್ತಿದ್ದು, ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.


    ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಆರ್ಡಿಪಿಆರ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕೂಸಿನ ಮನೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರ್ಥಿಕ ಸ್ವಾಲಂಬಿಗಳಾದಾಗ ಮಾತ್ರ ಭಾರತ ಸಂಪೂರ್ಣ ಅಭಿವೃದ್ಧಿ ಹೊಂದಲು ಸಾಧ್ಯ. ವಿಶೇಷವಾಗಿ ಉನ್ನತ ಶಿಕ್ಷಣ ಮತ್ತು ಉನ್ನತ ಹುದ್ದೆಯಲ್ಲಿ ಸ್ತ್ರೀಯರು ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.


    ನರೇಗಾ ಸೇರಿ ವಿವಿಧ ಕೆಲಸಗಳಿಗೆ ಮಹಿಳೆಯರು ತೆರಳಬೇಕಾದರೆ ತಮ್ಮ ಪುಟ್ಟ ಮಕ್ಕಳನ್ನು ಯಾರು ನೋಡಿಕೊಳ್ಳಬೇಕು ಎಂಬ ಪ್ರಶ್ನೆ ಕಾಡುತ್ತಿತ್ತು. ಇದನ್ನು ಮನಗಂಡ ಸಕರ್ಾರ ಇದೀಗ ಹೊಸ ಪರಿಕಲ್ಪನೆಯ ಕೂಸಿನ ಮನೆ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. 6 ತಿಂಗಳಿಂದ 3 ವರ್ಷದ ಮಕ್ಕಳನ್ನು ಇಲ್ಲಿ ಬಿಡಬಹುದು. ಕೇಂದ್ರದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸೇರಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಗುತ್ತದೆ ಎಂದು ತಿಳಿಸಿದರು.


    ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣವಾಗುತ್ತಿದ್ದು, ಆರ್ಒ ಪ್ಲಾಂಟ್ ವ್ಯವಸ್ಥೆ ಕಲ್ಪಿಸಬೇಕು. ಇದರ ಯೋಜನೆ ಇನ್ನಷ್ಟು ಉತ್ತಮಗೊಳ್ಳಲು ಈಗ ಮಿಸಲಿಟ್ಟಿರುವ ಅನುದಾನ ಸಾಕಾಗುವುದಿಲ್ಲ, ಹೆಚ್ಚಿನ ಹಣ ಒದಗಿಸಲು ಸಕರ್ಾರಕ್ಕೆ ಲಿಖಿತವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
    ತಾಪಂ ಇಒ ಬಸವರಾಜ ಶರಬೈ, ಗ್ರಾಪಂ ಅಧ್ಯಕ್ಷೆ ದೇವಮ್ಮ, ಸಹಾಯಕ ನಿದರ್ೇಶಕ ರಾಮಚಂದ್ರ ಬಸುದೆ, ಮುಖ್ಯಗುರು ಕೃಷ್ಣಾರಡ್ಡಿ ಪಾಟೀಲ್, ನಾರಾಯಣ ಸಿರ್ರಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts