More

    ಮಹಿಳೆಯರು ಆರ್ಥಿಕವಾಗಿ ಸಬಲರಾಗಿ

    ಯಾದಗಿರಿ: ಆಧುನಿಕರಣದ ಇಂದಿನ ದಿನಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಕರೆ ನೀಡಿದರು.

    ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದ ಹಿನ್ನೆಲೆಯಲ್ಲಿ ಬುಧವಾರ ನಗರದ ಜಿಲ್ಲಾಡಳಿತ ಭವನದಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ನಡೆದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಇಡೀ ಸಂಸಾರದ ಭಾರ ಹೊತ್ತುಕೊಳ್ಳುವ ಮಹಿಳೆ 4 ಗೋಡೆಗಳ ಮಧ್ಯೆ ಜೀವಿಸದೆ ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

    ಜಿಪಂ ಸಿಇಒ ಗರೀಮಾ ಪನ್ವಾರ ಮಾತನಾಡಿ, ಸಿರಿಧಾನ್ಯಗಳಿಂದ ತಯಾರಿದ ಖಾದ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೇಹದ ಆರೋಗ್ಯಕ್ಕೆ ಉಪಯುಕ್ತವಾಗಿರುವ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು ಎಂದು ಕಿವಿಮಾತು ಹೇಳಿದರು.

    ನವಣಿ ಸಜ್ಜೆ ಉಂಡೆ, ನವಣಿ ಬಿಸಿಬೆಳೆ ಬಾತ್, ನವಣಿ ಪಾಯಸ, ಸಜ್ಜೆ ಸಂಗಟಿ, ರಾಗಿ ಲಡ್ಡು, ಶಾವಗಿ ಹುಗ್ಗಿ, ಸಾವೆ ಬಿಸ್ಕತ್, ಸಜ್ಜೆ ಜಿಲೇಬಿ, ಕೊರಲೆ ಪಾಯಸ, ನವಣಿ ಲಡ್ಡು, ನವಣೆ ಬಿರಿಯಾನಿ, ಸಜ್ಜೆ ಮಾದಲಿ ಸೇರಿದಂತೆ ಬಗೆ ಬಗೆಯ ಖಾದ್ಯ ತಿನಿಸುಗಳನ್ನು ತಯಾರಿಸಲಾಗಿತ್ತು.
    ಖಾರ ಖಾದ್ಯ ಸ್ಪರ್ಧೆಯಲ್ಲಿ ಲಕ್ಷ್ಮೀ ಎಸ್. ರೆಡ್ಡಿ (ತಾಲಿಪಟ್) ತಯಾರಿಸಿ ಪ್ರಥಮ ಬಹುಮಾನ ಪಡೆದರೆ, (ಸವಣಿ ಬಿಸಿಬೇಳೆ ಬಾತ್) ಮಂಜುಳಾ ದ್ವಿತೀಯ ಬಹುಮಾನ ಪಡೆದರು. ಸಿಹಿ ಖಾದ್ಯಗಳಲ್ಲಿ ಲಲಿತಾ (ಸಜ್ಜೆ ಜಿಲೇಬಿ) ಪ್ರಥಮ, ಅರ್ಚನಾ ಸುರೇಶ ದ್ವಿತೀಯ ಸ್ಥಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts