More

    ಮಹಿಳೆಯರಿಗೆ ದುಡಿಮೆಗೆ ತಕ್ಕ ಮನ್ನಣೆ ದೊರೆಯಲಿ

    ಇಂಡಿ: ಮಹಿಳೆಯರು ರಾಜಕೀಯ, ಶೈಕ್ಷಣಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಹೊಂದಿ ಅವರೂ ಗೌರವದ ಬದುಕು ನಡೆಸುವ ಅವಕಾಶ ಪಡೆದುಕೊಂಡರೂ ಕೆಲವೆಡೆ ಶೋಷಣೆ ಮಾತ್ರ ಇನ್ನೂ ನಿಂತಿಲ್ಲ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ.ಪ್ರೀತಿ ಕೋಳೆಕರ ವಿಷಾದಿಸಿದರು.

    ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ, 88ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.

    ಬ್ರಹ್ಮ ಕುಮಾರಿ ಮುಖ್ಯಸ್ಥೆ ಬಿ.ಕೆ.ಯಮುನಾ ಅಕ್ಕನವರು ಮಾತನಾಡಿ, ನಮ್ಮ ಜನಸಂಖ್ಯೆಯಲ್ಲಿ ಶೇ.50 ರಷ್ಟು ಮಹಿಳೆಯರಿದ್ದರೂ ಕೆಲವು ಕಡೆ ಅವರ ದುಡಿಮೆಗೆ ಮನ್ನಣೆ ಸಿಗುತ್ತಿಲ್ಲ. ಅದರಲ್ಲೂ ಪ.ಜಾತಿ, ಪ.ಪಂಗಡ ಮಹಿಳೆಯರಲ್ಲಿ ಅಪಾರ ಪ್ರತಿಭೆ ಮತ್ತು ಕೌಶಲಗಳಿವೆ. ಆದರೆ ಒಟ್ಟು ಸೀಯರ ಪೈಕಿ ಶೇ.5 ರಿಂದ 10 ರಷ್ಟು ಮಂದಿ ಮಾತ್ರ ಅರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಹೆಣ್ಣುಮಕ್ಕಳ ದುಡಿಮೆಗೆ ನೆಲೆ ಬೆಲೆ ಸಿಕ್ಕರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

    ಕದಳಿ ವೇದಿಕೆ ಉಪಾಧ್ಯಕ್ಷ ರಾಜೇಶ್ವರಿ ಕ್ಷತ್ರಿ ಮಾತನಾಡಿ, ಮಹಿಳೆಯರು ಸದ್ಯ ರಾಷ್ಟ್ರಪತಿ ಹುದ್ದೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತಿರುವುದು ಶ್ಲಾಘನೀಯ ಎಂದರು.

    ಅಹಿರಸಂಗದ ರೇವಣಸಿದ್ಧ ಶಾಸಿಗಳು, ಶ್ರೀದೇವಿ ಅಕ್ಕನವರು, ಬಿ.ಕೆ.ಶಾಂತಾ ಅಕ್ಕನವರು, ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ, ರಾಜೇಶ್ವರಿ ಕೋಳೆಕರ, ಆರ್.ಪಿ.ಗುರವ, ಬಿ.ಎಚ್.ಪೋಲಿಸ್‌ಪಾಟೀಲ, ಶಿವಲಿಂಗಪ್ಪ ಪಟ್ಟದಕಲ್ಲ ಮಾತನಾಡಿದರು.

    ನಿವೃತ್ತ ಪ್ರಾಧ್ಯಾಪಕ ಎಂ.ಜೆ.ಪಾಟೀಲ, ದಯಾನಂದ ಸುರಪುರ, ಎಸ್.ಬಿ.ಬಿರಾದಾರ, ಶರಣಬಸವ ಪೋಲಿಸ್‌ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts