More

    ಮಹಿಳೆಗೆ ಮಾನಸಿಕ ದಾಸ್ಯದಿಂದ ಹೊರ ತನ್ನಿ

    ಕಲಬುರಗಿ : ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಮಾನಸಿಕವಾಗಿ ದಾಸ್ಯದಲ್ಲಿದ್ದು, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಮಹಿಳೆಯನ್ನು ದಾಸ್ಯದಿಂದ ಹೊರತರುವ ಕಾರ್ಯ ಮಾಡಬೇಕಾಗಿದೆ ಎಂದು ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ ಹೇಳಿದರು.
    ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ `ಮಹಿಳಾ ಸಬಲೀಕರಣ ಸಮಸ್ಯೆಗಳು ಮತ್ತು ಜವಬ್ದಾರಿ’ ವಿಷಯ ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಆಶಯ ಭಾಷಣ ಮಾಡಿದ ಅವರು, ಹಿರಿಯ ತಲೆಮಾರಿನವರು ಪದಕಟ್ಟಿ ಹಾಡುವವರಿದ್ದರೂ ಅವರೆಂದು ಹೊರಗೆ ಬಾರದೆ ತಮ್ಮ ಪ್ರತಿಭೆ ಪ್ರದರ್ಶಿಸಿಸುತ್ತಿರಲಿಲ್ಲ ಎಂದರು.
    ಮಹಿಳೆ ಅಬಲೆಯಲ್ಲ, ಸಬಲೆ ಎನ್ನುವುದನ್ನು ಎಷ್ಟರಮಟ್ಟಿಗೆ ತಿಳಿಸಿಕೊಡಬೇಕು. ಸಮಾಜದಲ್ಲಿ ಸಮಾನವಾಗಿ ಬದುಕಬೇಕು ಎನ್ನುವುದನ್ನು 20ನೇ ಶತಮಾನದಲ್ಲಿ ಈ ಬಗ್ಗೆ ಚಚರ್ೆ ಆಗಬೇಕು ಎಂದ ಅವರು, ದುರ್ಬಲ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಸಾವಿತ್ರಾಬಾಯಿ ಫುಲೆ ಶ್ರಮಿಸಿದ್ದಾಗ ಆಕೆಗೆ ಸೆಗಣಿ ಎರಚಿ ಅವಮಾನ ಮಾಡಿದ್ದನ್ನು ಸ್ಮರಿಸಿದರು.
    ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್.ರಾಗಾಪ್ರಿಯ ಉದ್ಘಾಟಿಸಿ, ಮಹಿಳೆಯರನ್ನು ಕೇವಲ ಗೌರವಿಸಿದರೆ ಸಾಲದು ಅವರಿಗೂ ಬದುಕಲು ಅವಕಾಶ ಮಾಡಿಕೊಡಬೇಕು. ಬಂಧನದಿಂದ ಮುಕ್ತರನ್ನಾಗಿಸಬೇಕು ಎಂದರು.
    ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಮಾತೋಶ್ರೀ ದಾಕ್ಷಾಯಣಿ ಸಾನ್ನಿಧ್ಯ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಕಾರ್ಯದಶರ್ಿ ಬಸವರಾಜ ದೇಶಮುಖ, ಪ್ರಾಚಾರ್ಯ ಡಾ. ನೀಲಾಂಬಿಕಾ ಉಪಸ್ಥಿತರಿದ್ದರು.

    ದುಡ್ಡು ಇದ್ದವರೆ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎನ್ನುವುದು ಸುಳ್ಳು. ದಿಲ್ಲಿ ಚುನಾವಣೆಯಲ್ಲಿ ಕೇಜ್ರಿವಾಲ ಗೆದ್ದಿರುವುದು ದುಡ್ಡಿನಿಂದಲ್ಲ. ಜನರು ನೀಡಿರುವ ತೆರಿಗೆ ಹಣದಿಂದಲೇ ಸೇವೆ ನೀಡಿದ್ದಾರೆ. ಉತ್ತಮ ಕೆಲಸ ಮಾಡುವವರಿಗೂ ಮನ್ನಣೆ ಸಿಗುತ್ತದೆ.
    | ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts