More

    ಮಹಿಳಾ ರೈತ ಘಟಕದಿಂದ ಪ್ರತಿಭಟನೆ

    ರೋಣ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ರೋಣ ತಾಲೂಕು ಮಹಿಳಾ ರೈತ ಘಟಕದಿಂದ ತಾಲೂಕಿನ ಯಾವಗಲ್ ಬಳಿ ರೋಣ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ರೈತ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹೇಮವ್ವ ಘಾಳಿ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆ ರೈತರಿಗೆ ಮಾರಕವಾಗಿದ್ದು ಕಾಯ್ದೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

    ಶಂಕ್ರವ್ವ ಅಂಗಡಿ, ಗಂಗವ್ವ ಹುಳ್ಯಾಳ, ಗುರಬಸವ್ವ ಘಾಳಿ, ಪ್ರೇಮವ್ವ ಜಾಲಿಕಟ್ಟಿ, ಪಾರವ್ವ ಕಡದಳ್ಳಿ, ಶಿವವ್ವ ಚಕ್ರದ, ಶಂಕ್ರವ್ವ ಮುಳ್ಳೂರ, ಮಲ್ಲವ್ವ ತಳವಾರ, ಶಿವವ್ವ ಕೊಂಗವಾಡ, ಶಿವಗಂಗವ್ವ ಕಡಿಯವರ ಇತರರಿದ್ದರು.

    ರಾಷ್ಟ್ರಪತಿಗೆ ರೈತರ ಮನವಿ

    ನರೇಗಲ್ಲ: ಕೃಷಿ ಮಸೂದೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ಶನಿವಾರ ಕರೆ ನೀಡಿದ್ದ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್​ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಗದಗ-ಗಜೇಂದ್ರಗಡ ರಾಜ್ಯ ಹೆದ್ದಾರಿಯಲ್ಲಿ ಎಂದಿನಂತೆ ವಾಹನಗಳು ಸಂಚರಿಸಿದವು. ಪಟ್ಟಣದ ರೈತ ಸೇನಾ ಘಟಕದಿಂದ ಹೊಸ ಬಸ್ ನಿಲ್ದಾಣದ ಹತ್ತಿರ ಉಪ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

    ರೈತ ಸೇನಾ ಮುಖಂಡ ಬಸವರಾಜ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ಜನಸಾಮಾನ್ಯರು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ’ ಎಂದು ದೂರಿದರು.

    ಚನ್ನಬಸಪ್ಪ ಕುಷ್ಟಗಿ, ಶಿವಪ್ಪ ಗೂಡಿ, ಮಲ್ಲಪ್ಪ ಮಳ್ಳಿ, ಅನೀಲ ಗೊಡಚಪ್ಪನವರ, ಶರಣಪ್ಪ ಧರ್ವಯತ, ಶೇಖಪ್ಪ ಲಕ್ಕನಗೌಡ್ರ, ಮಹಾಂತೇಶ ಸೋಮಗೊಂಡ, ರುದ್ರೇಶ ಕೊಟಗಿ, ನರೇಶ ಜೋಳದ, ಶಿವನಗೌಡ ಕಡದಳ್ಳಿ, ಆನಂದ ಕೊಟಗಿ, ಚಂದ್ರು ಹೊನ್ನವಾಡ, ಶರಣಪ್ಪ ಗಂಗರಗೊಂಡ, ಸಂಗನಗೌಡ ಮಾಲಿಪಾಟೀಲ, ಶರಣಪ್ಪ ಹಕ್ಕಿ, ಮಲ್ಲಪ್ಪ ಲಕ್ಕನಗೌಡ್ರ, ಮೋದಿನಸಾಬ ಬಾಳಿಕಾಯಿ, ಈರಪ್ಪ ಮುಗಳಿ, ವೀರಪ್ಪ ಹತ್ತಿಕಟಗಿ, ಶರಣಪ್ಪ ಗೋಸಗೊಂಡ, ಯಲ್ಲಪ್ಪ ಜುಟ್ಲ, ಶಶಿಧರ ಓದಿಸೂಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts