More

    ಮಹಿಳಾ ಪ್ರಯಾಣಿಕರಿಗೆ ‘ಮೇರಿ ಸಹೇಲಿ’ ಸುರಕ್ಷತೆ

    ಹುಬ್ಬಳ್ಳಿ: ಹಬ್ಬದ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಒಂಟಿಯಾಗಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಸುರಕ್ಷತಾ ದಳವು ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ‘ಮೇರಿ ಸಹೇಲಿ’ ಎಂಬ ವಿನೂತನ ಯೋಜನೆ ಪ್ರಾರಂಭಿಸಿದೆ.

    ದೆಹಲಿಯ ಆರ್​ಪಿಎಫ್ ಡಿಜಿ ಅರುಣಕುಮಾರ ಹಾಗೂ ನೈಋತ್ಯ ರೈಲ್ವೆ ವಲಯದ ಐಜಿ ಮತ್ತು ಪ್ರಧಾನ ಭದ್ರತಾ ಆಯುಕ್ತ ಆರ್.ಎಸ್. ಚೌವ್ಹಾಣ ನಿರ್ದೇಶನದ ಮೇರೆಗೆ ಈ ಯೋಜನೆ ಪ್ರಾರಂಭಿಸಲಾಗಿದೆ.

    ಹಬ್ಬದ ಅಂಗವಾಗಿ ಸಂಚರಿಸುವ ವಿಶೇಷ ರೈಲುಗಳಲ್ಲಿ ಈ ಸೇವೆ ಜಾರಿಯಲ್ಲಿರಲಿದೆ. ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಹುಬ್ಬಳ್ಳಿ/ವಾಸ್ಕೊಡಾಗಾಮಾ – ಹಜರತ್ ನಿಜಾಮುದ್ದಿನ್ /ಹುಬ್ಬಳ್ಳಿ- ವಾಸ್ಕೊಡಾಗಾಮಾ ಎಕ್ಸ್​ಪ್ರೆಸ್ ಸ್ಪೇಷಲ್, ಹುಬ್ಬಳ್ಳಿ- ಲೋಕಮಾನ್ಯ ತಿಲಕ್ ಟರ್ವಿುನಸ್- ಹುಬ್ಬಳ್ಳಿ ಎಕ್ಸ್​ಪ್ರೆಸ್ ಸ್ಪೇಷಲ್, ಹುಬ್ಬಳ್ಳಿ- ವಿಜಯವಾಡಾ- ಹುಬ್ಬಳ್ಳಿ ಎಕ್ಸ್​ಪ್ರೆಸ್ ಸ್ಪೇಷಲ್ ಮತ್ತು ಗದಗ- ಮುಂಬೈ ಸಿಎಸ್​ಎಂಟಿ- ಗದಗ ಎಕ್ಸ್​ಪ್ರೆಸ್ ಸ್ಪೇಷಲ್ ರೈಲುಗಳಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದೆ.

    ಮೇರಿ ಸಹೇಲಿ ಯೋಜನೆಯ ತಂಡದಲ್ಲಿ ಮಹಿಳಾ ಸಬ್ ಇನ್​ಸ್ಪೆಕ್ಟರ್ ಹಾಗೂ ಪೇದೆ ಕಾರ್ಯನಿರ್ವಹಿಸುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಬೋಗಿ ಸೇರಿದಂತೆ ಎಲ್ಲ ಪ್ರಯಾಣಿಕರ ವಿವರಗಳನ್ನು ಇವರು ಸಂಗ್ರಹಿಸುತ್ತಾರೆ. ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಮಾಹಿತಿ ಕಲೆ ಹಾಕುತ್ತಾರೆ.
    ಪ್ರಯಾಣದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ, ಅಪಾಯದ ಸಮಯದಲ್ಲಿ 182 ಸಂಖ್ಯೆಗೆ ಕರೆ ಮಾಡುವ ಬಗ್ಗೆ ತಂಡ ಮಹಿಳಾ ಪ್ರಯಾಣಿಕರಿಗೆ ಮಾಹಿತಿ ನೀಡುತ್ತದೆ. ಭದ್ರತಾ ಸಹಾಯಕ್ಕಾಗಿ ಹುಬ್ಬಳ್ಳಿ ವಿಭಾಗ ಮೋಬೈಲ್ ಸಂಖ್ಯೆ 7022626987 ಸಂರ್ಪಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts