More

    ಮಹಾಬಲೇಶ್ವರ ಮಹಾರಥೋತ್ಸವ ಸಂಭ್ರಮ

    ಗೋಕರ್ಣ: ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಮಹಾಬಲೇಶ್ವರ ಮಹಾರಥೋತ್ಸವ ಸೋಮವಾರ ಮಧ್ಯಾಹ್ನ ಸಾವಿರಾರು ಭಕ್ತರ ಜೈಕಾರದೊಂದಿಗೆ ವಿಜೃಂಭಣೆಯಿಂದ ನಡೆಯಿತು.

    ಮಹಾಬಲೇಶ್ವರ ಮಂದಿರದಲ್ಲಿ ಮಧ್ಯಾಹ್ನ 11:30ಕ್ಕೆ ಪ್ರಾರಂಭವಾದ ಆಗಮಿಕ ಪ್ರಕ್ರಿಯೆ 4 ಗಂಟೆಗೆ ಮುಗಿದ ಮಹಾ ರಥೋತ್ಸವದೊಂದಿಗೆ ಮಂಗಳವಾಯಿತು.

    ರಥಬೀದಿಯಲ್ಲಿ 3 ಗಂಟೆ ಸುಮಾರಿಗೆ ಆರಂಭವಾದ ಮಹಾರಥೋತ್ಸವ ವೆಂಕಟ್ರಮಣ ಮಂದಿರದವರೆಗೆ ಹೋಗಿ ಒಂದು ಗಂಟೆಯೊಳಗೆ ತಿರುಗಿ ಮೂಲಸ್ಥಾನ ಸೇರಿತು.ಅಂದಾಜು 15ರಿಂದ 20 ಸಾವಿರ ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದಲ್ಲಿ ದೂರದ ಊರುಗಳಿಂದ ಬಂದ ಯಾತ್ರಿಕ ಭಕ್ತರಿಗಿಂತ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ವಿದೇಶಿಯರು ಸಹ ಈ ವೇಳೆ ಉಪಸ್ಥಿತರಿದ್ದು ಮಹಾರಥೋತ್ಸವನ್ನು ವೀಕ್ಷಿಸಿದರು. ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು ಸಿಪಿಐ ಪರಮೇಶ್ವರ ಗುನಗ, ಪಿಎಸ್​ಐಗಳಾದ ನವೀನ ನಾಯ್ಕ, ವೀಣಾ ಹೊನ್ನಿ ಸ್ಥಳದಲ್ಲಿದ್ದರು.

    ಶ್ರೀಗಳ ಉಪಸ್ಥಿತಿ: ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮಹಾರಥೋತ್ಸವದ ವೇಳೆ ಉಪಸ್ಥಿತರಿದ್ದರು. ಗೌಡಪಾದಾಚಾರ್ಯ ಶ್ರೀ ಕೈವಲ್ಯಮಠಾಧೀಶ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ರಥ ಕಾಣಿಕೆ ಸಮರ್ಪಿಸಿದರು. ಫೆ.25ರಂದು ನಡೆಯುವ ಅವಭೃತ ಕಾರ್ಯಕ್ರಮ ಮತ್ತು ಅಂಕುರಾರ್ಪಣೆಯೊಂದಿಗೆ ಒಂಬತ್ತು ದಿನದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts