More

    ಮಹನೀಯರ ತತ್ವ ಪಾಲನೆ ಮಾಡಿ

    ಬೀದರ್: ಇಂದಿನ ಯುವಕರು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮಹಾನ ಪುರುಷರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯ ಗಿರಿ ಆಶ್ರಮದ ಪೀಠಾಧಿಪತಿ ಡಾ  ಬಸವಲಿಂಗ ಅವಧೂತರು ಅಭಿಪ್ರಾಯಪಟ್ಟರು.

    ಭಾಲ್ಕಿ ತಾಲ್ಲೂಕಿನ ಬರದಾಪುರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಹಾನ್ ವ್ಯಕ್ತಿಗಳು ಸಮಾಜದ ಅಭಿವೃದ್ಧಿಗಾಗಿ ದುಡಿದಿದ್ದಾರೆ ಎಂದರು.

    ಸಮಾಜದಲ್ಲಿ ಎಲ್ಲ ಧರ್ಮದ ಜನರು ಸಹೋದರರಂತೆ ಪ್ರೀತಿಯಿಂದ ಬಾಳಬೇಕು. ಯುವಕರು ಹಿರಿಯರನ್ನು ಗೌರವದಿಂದ ಕಾಣಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

    ತಾಯಂದಿರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಪರೋಪಕಾರ, ದೇಶ ಭಕ್ತಿ ಮೂಡುವಂತೆ ಬೆಳೆಸಬೇಕು. ಮಕ್ಕಳ ಶುಚಿಯಾದ ಅಂತರಾತ್ಮದಲ್ಲಿ ದೇವರು ನೆಲೆಸಿರುತ್ತಾನೆ. ಅಂತರಾತ್ಮವನ್ನು ಶುಚಿಯಾಗಿಟ್ಟುಕೊಂಡಿರುವ ಮನುಷ್ಯನನ್ನು ದೇವರು ರಕ್ಷಿಸುತ್ತಾನೆ. ಶ್ರದ್ಧೆ, ಭಕ್ತಿ, ದಾನ ಧರ್ಮ ಪರೋಪಕಾರದಂತಹ ಅಮುಲ್ಯವಾದ ಗುಣಗಳನ್ನು ಬೆಳೆಸಿಕೋಳ್ಳಬೇಕು ಎಂದು ಸಲಹೆ ನೀಡಿದರು.

    ಯುವಕರು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೋಳ್ಳಬೇಕು. ಪುರಾಣ, ಪ್ರವಚನ ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

    ಪ್ರಮುಖರಾದ ಶಶಿಧರ ಕಂದಗೂಳೆ, ಮಹಾದೇವ ಕಂದಗೂಳೆ, ಶಾಮರಾವ್ ಬಿರಾದಾರ, ಸಂತೋಷ ನಿಜಲಿಂಗೆ, ಪಂಚಾಯಿತಿ ಸದಸ್ಯ ಶಿವಕಾಂತ ನಿಜಲಿಂಗೆ, ಮಲ್ಲಿಕಾರ್ಜುನ ಪಾಟೀಲ ಮುಗನೂರ, ವಿಜಯಕುಮಾರ ಕಡಗಂಚೆ, ಶಿವು ಉಮ್ಮರಗೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts