More

    ಮಳೆಹಾನಿ ಪ್ರದೇಶದಲ್ಲಿ ತುರ್ತು ಕಾಮಗಾರಿಗೆ ಕ್ರಮ

    ಜಯಪುರ: ಮಲೆನಾಡಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಾಗೂ ಶಾಸಕ ಟಿ.ಡಿ.ರಾಜೇಗೌಡರ ಮನವಿ ಮೇರೆಗೆ ಮೇಗುಂದಾ ಹೋಬಳಿಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಹಾನಿ ಪ್ರದೇಶಗಳಲ್ಲಿ ಶಾಶ್ವತ ಹಾಗೂ ತುರ್ತು ಕಾಮಗಾರಿಗಳಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

    ಮೇಗುಂದಾ ಹೋಬಳಿ ವ್ಯಾಪ್ತಿಯ ಹೆಗ್ಗಾರುಕುಡಿಗೆ ಹೊರನಾಡು – ಶೃಂಗೇರಿ ಸಂಪರ್ಕ ರಸ್ತೆ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂದು ಹೆಗ್ಗಾರುಕುಡಿಗೆ ರಸ್ತೆ ಕುಸಿತ, ಉತ್ತಮೇಶ್ವರದ ಸೇತುವೆ ಹಾನಿ, ಕೊಗ್ರೆ ಸೇತುವೆ ಕಾಮಗಾರಿ ಪರಿಶೀಲನೆ, ಗುಡ್ಡೇತೋಟದ ಭೂಕುಸಿತ ಪ್ರದೇಶ ಹಾಗೂ ಹುತ್ತಿನಗದ್ದೆ ಭೂಕುಸಿತ ಪ್ರದೇಶಗಳಿಗೆ ಶಾಸಕ ರಾಜೇಗೌಡರೊಂದಿಗೆ ಭೇಟಿ ನೀಡಿ ಅಗತ್ಯ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿಗೆ ಆದೇಶಿಸಿದ್ದೇನೆ. ಹೆಗ್ಗಾರುಕುಡಿಗೆ ರಸ್ತೆ ಕುಸಿತ ಕಾಮಗಾರಿ 3 ಕೋಟಿ ರೂ.ವೆಚ್ಚದಲ್ಲಿ ನಡೆಯಲಿದ್ದು, ಉತ್ತಮೇಶ್ವರದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲು ಸೂಚಿಸಿದ್ದೇನೆ ಎಂದರು. ಎಸ್ಪಿ ಉಮಾ ಪ್ರಶಾಂತ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ.ಗೋಪಾಲಕೃಷ್ಣ, ಎಸಿ ರಾಜೇಶ್ ಹಾಗೂ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts