More

    ಮಲಬಾಲರ್ ಗೋಲ್ಡ್ ನಲ್ಲಿ ‘ಕಲಾತ್ಮಕ ಬ್ರಾಂಡೆಡ್ ಜ್ಯುವೆಲ್ಲರಿ ಶೋ’

    ಮೈಸೂರು: ನಗರದ ಬಿಎನ್ ರಸ್ತೆಯ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣ ಬಳಿ ಇರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ‘ಕಲಾತ್ಮಕ ಬ್ರಾಂಡೆಡ್ ಜ್ಯುವೆಲ್ಲರಿ ಶೋ’ಗೆ ಶನಿವಾರ ಚಾಲನೆ ದೊರೆಯಿತು.

    ಚಿನ್ನ, ವಜ್ರ ಮತ್ತು ಅಮೂಲ್ಯ ರತ್ನಗಳ ಸೊಗಸಾದ ವಿನ್ಯಾಸದ ಆಭರಣಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ ಮೇ 19ರವರೆಗೆ ಆಯೋಜಿಸಲಾಗಿದೆ. ಪ್ರದರ್ಶನವು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಉಪ-ಬ್ರಾಂಡ್‌ಗಳಿಂದ ಆಯ್ದ ರಚನೆಗಳನ್ನು ಒಳಗೊಂಡಿದೆ. ‘ಮೈನ್’ ಡೈಮಂಡ್ ಆಭರಣಗಳು, ‘ಎರಾ’ ಕತ್ತರಿಸದ ವಜ್ರದ ಆಭರಣಗಳು, ಡಿವೈನ್ ಇಂಡಿಯನ್ ಹೆರಿಟೇಜ್ ಆಭರಣಗಳು, ಎಥಿನಿಕ್ಸ್ ಕರಕುಶಲ ಆಭರಣಗಳು, ಪ್ರಿಶಿಯಾ ಮತ್ತು ಅಮೂಲ್ಯವಾದ ರತ್ನದ ಆಭರಣಗಳು, ‘ಸ್ಟಾರ್ಲೆಟ್’ ಮಕ್ಕಳ ಆಭರಣಗಳು ಪ್ರದರ್ಶನದ ಸಮಯದಲ್ಲಿ ವಿಶೇಷ ಸವಲತ್ತುಗಳೊಂದಿಗೆ ಖರೀದಿಸಬಹುದು.

    ಮೇ 12ರೊಳಗೆ ಆಭರಣ ಖರೀದಿಸಿದರೆ ವಿಶೇಷ ರಿಯಾಯಿತಿಗಳನ್ನು ಪಡೆಯಬಹುದು. ಚಿನ್ನಾಭರಣ ಖರೀದಿಸಿದರೆ ಮೇಕಿಂಗ್ ಚಾರ್ಚ್‌ನಲ್ಲಿ ಶೇ.25 ರಷ್ಟು ರಿಯಾಯಿತಿ ನೀಡಲಾಗುವುದು. ಅಲ್ಲದೆ, ಪ್ರಿಶಿಯಾ ಎರಾ, ಸ್ಟಡ್ಡ್ ಆಭರಣಗಳ ಖರೀದಿಯಲ್ಲಿ ಶೇ.25 ರಷ್ಟು ರಿಯಾಯಿತಿ, ವಜ್ರಾಭರಣಗಳ ಖರೀದಿಸಿದರೆ ವಜ್ರದ ಮೌಲ್ಯದ ಮೇಲೆ ಶೇ.25 ರಷ್ಟು ರಿಯಾಯಿತಿ ದೊರೆಯಲಿದೆ.

    ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸೌತ್ ಜೋನಲ್ ಹೆಡ್ ಪಿ. ಶರಫುದೀನ್ ಮಾತನಾಡಿ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಬಿಐಎಸ್ ಹಾಲ್‌ಮಾರ್ಕ್ 916 ಚಿನ್ನ, ಐಜಿಐ ಪ್ರಮಾಣೀಕೃತ ವಜ್ರದ ಆಭರಣಗಳು, ಪಿಜಿಐ ಪ್ರಮಾಣೀಕೃತ ಪ್ಲಾಟಿನಂ ಆಭರಣಗಳು ಮತ್ತು ಹಾಲ್‌ಮಾರ್ಕ್ ಬೆಳ್ಳಿ ಆಭರಣಗಳನ್ನು ಮಾತ್ರ ಮಾರಾಟ ಮಾಡುತ್ತದೆ. ಎಲ್ಲ ಉತ್ಪನ್ನಗಳು ವಿವರವಾದ ಮತ್ತು ಪಾರದರ್ಶಕ ಬೆಲೆಯೊಂದಿಗೆ ಒಟ್ಟು ತೂಕ, ಕಲ್ಲಿನ ತೂಕ, ಮೇಕಿಂಗ್ ಚಾರ್ಜ್, ಕಲ್ಲಿನ ಚಾರ್ಜ್ ಮತ್ತು ನಿವ್ವಳ ತೂಕದಂತಹ ವಿವರಗಳು ದೊರೆಯಲಿದೆ. ಇದು ಗ್ರಾಹಕರಿಗೆ ಉತ್ಪನ್ನದ ಬೆಲೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಅವರ ಖರೀದಿಗಳನ್ನು ಯೋಜಿಸಲು ಅನುವು ಮಾಡಿಕೊಡುತ್ತದೆ ಎಂದರು.

    ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಮೌಲ್ಯವರ್ಧಿತ ಸೇವೆಗಳು ಆಜೀವ ಉಚಿತ ನಿರ್ವಹಣೆ, ಒಂದು ವರ್ಷದ ಉಚಿತ ವಿಮಾ ರಕ್ಷಣೆ ಮತ್ತು ನಮ್ಮ ಎಲ್ಲ ಆಭರಣಗಳಿಗೆ ಮರುಖರೀದಿ ಗ್ಯಾರಂಟಿ, ಶುದ್ಧತೆ ಖಚಿತಪಡಿಸಿಕೊಳ್ಳಲು ಕ್ಯಾರೆಟ್ ವಿಶ್ಲೇಷಕ ಸೌಲಭ್ಯವನ್ನು ಹೊಂದಿವೆ ಎಂದರು.

    ನಟಿ ಪಿ. ಅಂಜಲಿ ಆಭರಣಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಅಸಿಸ್ಟೆಂಟ್ ಸ್ಟೋರ್ ಹೆಡ್ ಫಸಾಲ್ ರೆಹಮಾನ್, ಖಾಸಗಿ ಕಂಪನಿ ಉದ್ಯೋಗಿ ಕೆ.ಎಸ್. ದಿವ್ಯಾ, ವಿದ್ಯಾರ್ಥಿನಿಯರಾದ ಮೆಹೆಕ್ ನಿಶಾದ್, ಭೂಮಿಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts