More

    ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ಸಲ್ಲ: ಕಿರಣ ಕಾಳೆ

    ವಿಜಯಪುರ: ರಾಜ್ಯ ಸರ್ಕಾರ ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಿರುವುದು ಸ್ವಾಗತಾರ್ಹ. ಆದರೆ ಅದನ್ನು ಕೆಲ ಕನ್ನಡಪರ ಸಂಘಟನೆಗಳು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಮುಖಂಡ ಕಿರಣ ಕಾಳೆ ಹೇಳಿದರು. ಮರಾಠಾ ಪ್ರಾಧಿಕಾರ ಜಾತಿಯ ಅಭಿವೃದ್ಧಿಯ ಪ್ರಾಧಿಕಾರವಾಗಿದೆಯೇ ಹೊರತು ಭಾಷೆಯ ಪ್ರಾಧಿಕಾರ ಅಲ್ಲ. ಅನೇಕ ವರ್ಷಗಳಿಂದ ರಾಜ್ಯದಲ್ಲಿರುವ ಮರಾಠಿಗರು ಕನ್ನಡ ಬಾಷೆ, ನೆಲ,ಜಲಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ. ಮಹಾರಾಷ್ಟ್ರದ ಎಂಇಎಸ್ ಸಂಘಟನೆಗೂ, ಪ್ರಾಧಿಕಾರ ರಚನೆಗೂ ಯಾವುದೇ ಸಂಬಂಧ ಕಲ್ಪಿಸಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕ್ಷತ್ರೀಯ ಒಕ್ಕೂಟದ ಜಿಲ್ಲಾಧ್ಯಕ್ಷ ಪರಶುರಾಮ ರಜಪೂತ ಮಾತನಾಡಿ, ಮರಾಠ, ರಜಪೂತ ಮುಂತಾದ ಸಮುದಾಯ ನೂರಾರು ವರ್ಷಗಳಿಂದ ದಕ್ಷಿಣಭಾರತದಲ್ಲಿದ್ದಾರೆ. ಅವರು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದಾರೆ. ಅದಕ್ಕೆ ಮರಾಠಾ ಸಮುದಾಯಕ್ಕೆ ನೀಡಿದಂತಹ ಈ ಪ್ರಾಧಿಕಾರ ಸಮಾಜದ ಅಭಿವೃದ್ಧಿಗಾಗಿ ಅವಶ್ಯಕತೆಯಾಗಿದೆ ಎಂದರು. ಕಾಂಗ್ರೆಸ್ ಮುಖಂಡ ವಿಜಯಕುಮಾರ ಘಾಟಗೆ ಮಾತನಾಡಿ, ಎಂಇಎಸ್ ಪುಂಡಾಟಿಕೆ ವಿರುದ್ಧ ವಿಜಯಪುರದ ಮರಾಠಾ ಸಮುದಾಯದವರು ಅನೇಕ ಭಾರಿ ಪ್ರತಿಭಟನೆಯನ್ನು ಮಾಡಿದ್ದೇವೆ ಮತ್ತು ಈ ಸಂಘಟನೆಯನ್ನು ನಿಷೇಧಿಸಬೇಕೆಂದು ಹಲವಾರು ಹೋರಾಟಗಳಲ್ಲಿ ಒತ್ತಾಯಿಸಿದ್ದೇವೆ. ಶೀಘ್ರವೇ ರಾಜ್ಯ ಸರ್ಕಾರ ಎಂಇಎಸ್ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು. ಬಂಜಾರಾ ಸಮಾಜದ ಶ್ರೀ ಗೋಪಾಲ ಮಹಾರಾಜ, ಕರವೇ(ಪ್ರವೀಣಶೆಟ್ಟಿ ಬಣ) ಮಾಜಿ ಜಿಲ್ಲಾಧ್ಯಕ್ಷ ಸಂತೋಷ ಪವಾರ, ಮುಖಂಡರಾದ ವಿಜಯಕುಮಾರ ಚವಾಣ್, ತುಳಸಿರಾಮ ಸೂರ್ಯವಂಶಿ, ವಿಶ್ವನಾಥ ಭೋಸಲೆ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts