More

    ಮನೆ ಮಂಜೂರಾತಿಗೆ ಪ್ರವಾಹ ಸಂತ್ರಸ್ತರ ಒತ್ತಾಯ

    ಕಾಗವಾಡ: ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ ಮನೆ ಮಂಜೂರು ಮಾಡುವಂತೆ ಒತ್ತಾಯಿಸಿ ತಾಲೂಕಿನ ಜುಗೂಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಾಪುರ ಗ್ರಾಮಸ್ಥರು ಪಂಚಾಯಿತಿ ಎದುರು ಗುರುವಾರ ಪ್ರತಿಭಟಿಸಿದರು.

    ಶಹಾಪುರ ಗ್ರಾಮಸ್ಥರು ಮಾತನಾಡಿ, 2019 ಮತ್ತು 2021ರಲ್ಲಿ ಗ್ರಾಮ ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದೆ. 2019ರಲ್ಲಿ ಪ್ರವಾಹಕ್ಕೆ ಸಿಲುಕಿದ 92 ಮನೆ ಮಂಜೂರು ಮಾಡಿ ಸರ್ಕಾರ ಎ ಮತ್ತು ಬಿ ವರ್ಗದ ಎಂದು ಗುರುತಿಸಿದೆ. ಆದರೆ, ಇವೆರಗೂ ಮನೆ ನಿರ್ಮಾಣ ಮತ್ತು ಅನುದಾನ ಎರಡೂ ಬಿಡುಗಡೆಯಾಗಿಲ್ಲ. ಇದೀಗ ಸಿ ಶ್ರೇಣಿಯಲ್ಲಿ ಪಟ್ಟಿ ಮಾಡಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ವೇ ಕಾರ್ಯ ಕೈಗೊಂಡು ಯಥಾಸ್ಥಿತಿ ಮುಂದುವರಿಸಿ ಮನೆ ಮಂಜೂರು ಮಾಡಲು ಸರ್ಕಾರಕ್ಕೆ ಡಿ.18ರವರೆಗೆ ಕಾಲಾವಕಾಶ ನೀಡಲಾಗುತ್ತಿದೆ. ನಮ್ಮ ಬೇಡಿಕೆ ಪೂರೈಸದಿದ್ದಲ್ಲಿ ಡಿ.19ರಿಂದ ಕಾಗವಾಡ ತಹಸೀಲ್ದಾರ್ ಕಚೇರಿ ಎದರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಕಾಗವಾಡ ಶಿರಸ್ತೇದಾರ ಜಿತೇಂದ್ರ ನಿಡೋಣಿ, ಕಂದಾಯ ನಿರೀಕ್ಷಕ ಶಫೀಕ್ ಮುಲ್ಲಾ ಗ್ರಾಮಕ್ಕೆ ಆಗಮಿಸಿದ್ದರೂ ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದರು. ಗ್ರಾಮಸ್ಥರಾದ ಉಮೇಶ ಪಾಟೀಲ, ವಿಜಯ ನಾಯಿಕ, ಸುಕುಮಾರ ಕಾಂಬಳೆ, ಕಲ್ಲಪ್ಪ ದೊಡ್ಡಮನಿ, ಸದಾಶಿವ ಕಾಂಬಳೆ, ಜಲಜಾಕ್ಷಿ ಕಾಂಬಳೆ, ಪ್ರೇಮಾ ಕಾಂಬಳೆ, ನೀತಾ ಕಾಂಬಳೆ, ಮಂಗಲ ಮಾಲಗಾಂವೆ, ಉಮಾ ಉದಗಾಂವೆ, ರುಕ್ಸಾನಾ ಸನದಿ, ಶೋಭಾ ಕಾಂಬಳೆ, ನರ್ಮದಾ ಕಾಂಬಳೆ, ಸುಗಂಧಾ ದೊಡ್ಡಮನಿ, ನೀಲಾ ಸ್ವಾಮಿ, ಬಾಬಾಸಾಬ ಹುನ್ನರಗಿ, ಮಾದಗೌಡ ಪಾಟೀಲ, ದೀಪಕ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts