More

    ಮನೆಮನೆಗೆ ಕೇಂದ್ರದ ಯೋಜನೆಗಳ ಮಾಹಿತಿ

    ಮುದ್ದೇಬಿಹಾಳ: ಕೇಂದ್ರ ಮತ್ತು ರಾಜ್ಯ ಬಿಜೆಪಿ ನಿರ್ದೇಶನದ ಮೇರೆಗೆ ಮಂಡಲ ವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆಗೂ ಬಿಜೆಪಿ ಕಾರ್ಯಕರ್ತರು ತೆರಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನತೆಗೆ ನೀಡಿರುವ ಜನಪರ ಕೊಡುಗೆಗಳು, ಯೋಜನೆಗಳ ಮಾಹಿತಿ ಒದಗಿಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿಯ ಸಾಧನೆಗಳನ್ನು ಜನತೆಗೆ ತಿಳಿಸಿಕೊಡಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್ ಹೇಳಿದರು.

    ಭಾನುವಾರ ಚಾಲನೆಗೊಂಡ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಪರ್ಕ ಅಭಿಯಾನ, ಗೋಡೆ ಬರಹ ಮತ್ತು ಗ್ರಾಮ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಪ್ರಾರಂಭದ ಹಂತವಾಗಿ ಪಟ್ಟಣದ ವೀರೇಶನಗರದಲ್ಲಿ ಮನೆಮನೆಗೆ ಹೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಆಡಳಿತಾವಧಿಯಲ್ಲಿ ಜನರಿಗೆ ಕೊಟ್ಟಿರುವ ಜನಪರ ಯೋಜನೆಗಳ ಕರಪತ್ರ, ಕ್ಯಾಲೆಂಡರ್ ವಿತರಿಸುವ, ಗೋಡೆ ಬರಹ ಬರೆಯುವ ಮೂಲಕ ಮನೆಮನೆ ಪ್ರಚಾರ ನಡೆಸಲಾಯಿತು.

    ಅಭಿಯಾನದ ತಾಲೂಕು ಸಂಚಾಲಕಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಶ್ರೀಶೈಲ ದೊಡಮನಿ, ವಿಸ್ತಾರಕ ಮಾಣಿಕ ಹಿರಟ್ಟಿ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಗೌರಮ್ಮ ಹುನಗುಂದ ಬಲದಿನ್ನಿ, ಪುರಸಭೆ ಮಾಜಿ ಸದಸ್ಯರಾದ ರಾಜಶೇಖರ ಹೊಳಿ, ರಾಜು ಬಳ್ಳೊಳ್ಳಿ, ಪ್ರಮುಖರಾದ ಸಂತೋಷ ಬಾದರಬಂಡಿ, ಸಂಜು ಬಾಗೇವಾಡಿ, ಶೇಖರ ಢವಳಗಿ, ರಾಜಶೇಖರ ಮ್ಯಾಗೇರಿ, ಹಣಮಂತ ನಲವಡೆ, ನಿರ್ಮಲಾ ಪುರಾಣಿಕಮಠ, ಅಶೋಕ ಚಿನಿವಾರ, ವೀರೇಶನಗರ ಬಡಾವಣೆಯ ಪ್ರಮುಖರಾದ ಅಶೋಕ ಸಜ್ಜನ, ಶರಣು ಪಡದಾಳಿ, ಸಂಪತ್ ದಡ್ಡಿ, ಶರಣು ಸಜ್ಜನ, ಗುರು ಕಡಿ, ದೀಪಕಸಿಂಗ್ ರಾಯಚೂರ, ಶಿವು ದಡ್ಡಿ, ಸೋಮು ಕಂಠಿ, ಜಗದೀಶ ಹುರಕಡ್ಲಿ, ವಿನೋದ ಶಿವಸಿಂಪಿ, ಮಲ್ಲಿ ಕಡಿ, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts