More

    ಮನುಷ್ಯರಿಗೆ ದುರಾಸೆ ಸಲ್ಲ

    ಭಟ್ಕಳ: ಸಂವಿಧಾನ, ಧರ್ಮ ಹಾಗೂ ನ್ಯಾಯಾಂಗದ ಬಗ್ಗೆ ಅಧ್ಯಯನವಿಲ್ಲದೆ ಸಮಾಜದಲ್ಲಿ ಅಲ್ಲೊಲ್ಲ ಕಲ್ಲೊಲ್ಲ ಸೃಷ್ಟಿಯಾಗುತ್ತಿದೆ. ಮನುಷ್ಯರಿಗೆ ಆಸೆ ಇರಬೇಕು ದುರಾಸೆ ಇರಬಾರದು ಎಂದು ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

    ಆಸರಕೇರಿ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಭಕ್ತರಿಗೆ ಆಶೀರ್ವಚನ ನೀಡಿದರು.

    ಹಿಂದುಳಿದ ವರ್ಗದವರು ಪ್ರಭುದ್ಧ್ದೆ ಕುರಿತು ಮಾತನಾಡುತ್ತಿದ್ದಾರೆ. ಶ್ರೀ ನಾರಾಯಣ ಗುರು ಅವರ ಆದರ್ಶದಲ್ಲಿ ಬದುಕುವ ಅವರು ತಮ್ಮ ಮನೆಯ ರಕ್ಷಣೆಗಾಗಿ ಅವರ ಹಕ್ಕನ್ನು ಕೇಳುತ್ತಿದ್ದಾರೆ. ಸಜ್ಜನರು ಮೌನವಾಗಿದ್ದರೆ ವ್ಯವಸ್ಥೆಯೇ ಬುಡಮೇಲಾಗುತ್ತದೆ. ನಮ್ಮ ಚಿಂತನೆಯನ್ನು ಸರ್ಕಾರಕ್ಕೆ ತಲುಪಿಸಲು ನ್ಯಾಯಯುತ ಹೋರಾಟ ನಡೆಸುವುದು ತಪ್ಪೇನಲ್ಲ ಎಂದರು.

    ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿದರು. ಸಮಾಜದ ನಿವೃತ್ತ ಸೈನಿಕರನ್ನು, ಬುದವಂತರನ್ನು, ದಾಸರನ್ನು ಸನ್ಮಾನಿಸಲಾಯಿತು. ಭಟ್ಕಳ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಸಮಾಜ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಸದಸ್ಯರು ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts