More

    ಮನಸ್ಸು ಒಗ್ಗೂಡಲು ಸಂಘಟನೆ ಅಗತ್ಯ

    ಗೋಕಾಕ: ಮನಸ್ಸುಗಳು ಒಗ್ಗೂಡಿಸಲು ಸಂಘಟನೆಯ ಅವಶ್ಯಕತೆ ಇದ್ದು, ಸಂಘಟನೆಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.

    ನಗರದ ಜೆಎನ್‌ಎಸ್ ಶಾಲಾ ಸಭಾಂಗಣದಲ್ಲಿ 1992ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸೋಮವಾರ ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು 1992ನೇ ಸಾಲಿನ ವಿದ್ಯಾರ್ಥಿಗಳು ಸೇರಿ ಸಂಘ ಕಟ್ಟಿಕೊಂಡು ನಮ್ಮ ಶಾಲೆ ನಮ್ಮ ಕೊಡುಗೆ ಎಂಬ ಯೋಜನೆ ರೂಪಿಸಿ ತಾವು ಕಲಿತ ಶಾಲೆಗೆ ಅವಶ್ಯಕ ವಸ್ತು ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ಶಾಲೆಗೆ 3 ಕೊಠಡಿ ಕಟ್ಟಿಸಿಕೊಡುವ ಚಿಂತನೆ ಇದೆ ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾತನಾಡಿ, ಭೂಮಿ ಮೇಲೆ ಹುಟ್ಟಿದ ನಂತರ ತಂದೆ-ತಾಯಿ, ಗುರು ಮತ್ತು ಸಮುದಾಯದ ಋಣ ತೀರಿಸಲು ಆಗುವುದಿಲ್ಲ. ಸತ್ಕಾರ್ಯಗಳಿಂದ ಅದನ್ನು ಸಾಧ್ಯ ಮಾಡುವ ಕಾರ್ಯವಾಗಬೇಕು ಎಂದರು. ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ಉದ್ಘಾಟಿಸಿದರು. ಜೆಎನ್‌ಎಸ್ 1992ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಜೆಎನ್‌ಎಸ್ ಶಾಲಾ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ಕೊಡುಗೆಯಾಗಿ ನೀಡಲಾಯಿತು. ನಿವೃತ್ತ ಶಿಕ್ಷಕ ಎಂ.ಎನ್.ಹಾದಿಮನಿ ಶಾಲಾಭಿವೃದ್ದಿಗಾಗಿ 5 ಸಾವಿರ ರೂ.ಕೊಡುಗೆಯಾಗಿ ನೀಡಿದರು. ವಿವಿಧ ಸಾಲಿನಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಶಾಲಾಭಿವೃದ್ದಿಗಾಗಿ ತನು-ಮನ-ಧನದಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಬಿ.ಪಾಟೀಲ, ಪ್ರಭಾರಿ ಮುಖ್ಯೋಪಾಧ್ಯಾಯ ಎಂ.ಬಿ.ಬಳಗಾರ, ನಿವೃತ್ತ ಶಿಕ್ಷಕ ಮಹಾದೇವಪ್ಪ ಹಾದಿಮನಿ, ಉದಯ ಚಬ್ಬಿ, ಶಿಕ್ಷಣ ಸಂಯೋಜಕ ಎಂ.ಬಿ.ವಣ್ಣೂರ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಶೆಟ್ಟಿ, ಕಾರ್ಯದರ್ಶಿ ಪ್ರದೀಪ ನಿಂಬಾಳಕರ, ಉಪಾಧ್ಯಕ್ಷ ರೋಹಿತ್ ಬೆನ್ನಾಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts