More

    ಮದ್ಯದಂಗಡಿ ಬಂದ್ ಮಾಡಿಸಿದ ನಾರಿಯರು

    ಹೊಳೆಆಲೂರ: ಮದ್ಯ ಮಾರಾಟದಿಂದ ರೋಸಿಹೋದ ಗ್ರಾಮದ ಮಹಿಳೆಯರು ಗುರುವಾರ ಎರಡು ಮದ್ಯದಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.

    ಉತ್ತರ ಕರ್ನಾಟಕ ರೈತ ಮಹಿಳಾ ಸಂಘಟನೆಯ ಹೊಳೆಆಲೂರ ಘಟಕದ ಅಧ್ಯಕ್ಷೆ ಶಾಂತಾ ಕಾತರಕಿ ಮಾತನಾಡಿ, ‘ಸಮೀಪದ ಬಾದಾಮಿ ತಾಲೂಕಿನ ಡಾಣಕಶಿರೂರ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮದಲ್ಲಿ ಮದ್ಯ ಮಾರಲು ಅವಕಾಶ ಕೊಟ್ಟಿರುವವರಿಗೆ ನಾಚಿಕೆಯಾಗಬೇಕು. ಕೇವಲ 8 ರಿಂದ 10 ಕಿಮೀ.ವ್ಯಾಪ್ತಿಯಲ್ಲಿ ಹೊಳೆಆಲೂರ ಹೋಬಳಿಯ ಹತ್ತಾರು ಗ್ರಾಮಗಳು ಡಾಣಕಶಿರೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತವೆ. ಆ ಎಲ್ಲ ಗ್ರಾಮಗಳ ನೂರಾರು ಜನರು ಮದ್ಯ ಕುಡಿಯಲು ಬಂದು ಹೊಳೆಆಲೂರಿನ ಅಕ್ಕ ಪಕ್ಕದ ರಸ್ತೆ ಹಾಗೂ ಹೊಲದಲ್ಲಿ ಬಿದ್ದಿದ್ದಾರೆ. ತರಕಾರಿ, ದಿನಸಿ ಇತ್ಯಾದಿ ದಿನ ಬಳಕೆ ವಸ್ತು ಖರೀದಿಸಲು ಮೀನಮೇಷ ಎಣಿಸುತ್ತಿರುವಾಗ ಮದ್ಯದಂಗಡಿ, ಹೋಟೆಲ್​ಗಳನ್ನು ಗ್ರಾಮದಲ್ಲಿ ರಾಜಾರೋಷವಾಗಿ ಆರಂಭವಾಗಿರುವುದು ಸಾರ್ವಜನಿಕರಿಗೆ ಭಯದ ವಾತಾವರಣ ಮೂಡಿಸಿದೆ. ಮದ್ಯದಂಗಡಿಗಳನ್ನು ತಕ್ಷಣ ಬಂದ್ ಮಾಡಬೇಕು ಇಲ್ಲವಾದರೆ ಮದ್ಯದಂಗಡಿಯ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಪಟ್ಟುಹಿಡಿದರು.

    ಎಎಸ್​ಐ ಮಹೇಶ ಹೆರಕಲ್ಲ, ಮೇಘರಾಜ ಅಲ್ಲಿಪೂರ, ಪಿಡಿಒ ಮಂಜುನಾಥ ಗಣಿ ಸ್ಥಳಕ್ಕೆ ಆಗಮಿಸಿ ಸರ್ಕಾರದ ಆದೇಶದಂತೆ ಮದ್ಯದಂಗಡಿ ಆರಂಭಿಸಲಾಗಿದೆ. ಸಮಾಧಾನದಿಂದ ವಿಚಾರಿಸೋಣ ಎಂದರು. ಆಗ ಮಹಿಳೆಯರು ಅವರ ಮಾತು ಕೇಳಲಿಲ್ಲ. ಅನಿವಾರ್ಯವಾಗಿ ಗ್ರಾಮದ ವಿವೇಕ ವೈನ್ ಶಾಪ್ ಹಾಗೂ ಪ್ರಗತಿ ವೈನ್ ಶಾಪ್​ಗಳನ್ನು ಬಂದ್ ಮಾಡಿಸಲಾಯಿತು.

    ಶರಣಮ್ಮ ಯಾದವಾಡ, ಲಕ್ಷ್ಮೀಬಾಯಿ ಹೆಗ್ರಿ, ದಾಕ್ಷಾಯಿಣಿ ಹೆಬ್ಬಳ್ಳಿ, ಸುಮಂಗಲಾ ಕಾತರಕಿ, ಸರೋಜಮ್ಮ ಗೌರಿಮಠ, ಶಿವವ್ವ ಮೂಲಿಮನಿ, ಹನುಮವ್ವ ಕಡಿಯವರ, ಶಾವಕ್ಕ ಪೂಜಾರ, ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts