More

    ಮದ್ಯದಂಗಡಿಗೆ ಅನುಮತಿ ಬೇಡ

    ಚಿಕ್ಕಮಗಳೂರು: ಅಜ್ಜಂಪುರ ತಾಲೂಕು ಶಿವನಿ ಗ್ರಾಮದಲ್ಲಿ ಮತ್ತೊಂದು ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಶ್ರೀ ರೇವಣಸಿದ್ದೇಶ್ವರ ಸ್ವಸಹಾಯ ಸಂಘ, ಶ್ರೀ ಬೀರಲಿಂಗೇಶ್ವರ ಸ್ವಸಹಾಯ ಸಂಘದ ಪದಾಧಿಕಾರಿಗಳು, ಸತ್ಯ ಸಂಘದ ಮಹಿಳೆಯರು ಹಾಗೂ ಶಿವನಿ ಗ್ರಾಮಸ್ಥರು ನಗರದ ಆಜಾದ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಗ್ರಾಮದಲ್ಲಿ ಈಗಾಗಲೇ ಎರಡು ಅಂಗಡಿಗಳಿವೆ. ಇವುಗಳಿಂದಲೇ ಹಲವರ ಜೀವನ ಬೀದಿಗೆ ಬಂದಿದೆ. ಇನ್ನಂದು ಅಂಗಡಿ ತೆರೆಯಲು ಅವಕಾಶ ಕಲ್ಪಿಸಿದರೆ ಬಹಳಷ್ಟು ಕುಟುಂಬಗಳು ಬೀದಿಪಾಲಾಗಲಿವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇದರಿಂದ ಗ್ರಾಮದ ಹಿಂದುಳಿದ ವರ್ಗದವರಿಗೆ ತೀವ್ರ ತೊಂದರೆಯಾಗಲಿದೆ ಎಂದು ಅಳಲು ತೋಡಿಕೊಂಡರು.

    ಶಿವನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೂಲಿ ಕಾರ್ವಿುಕರು, ಹಿಂದುಳಿದ ಸಮುದಾಯಗಳು ವಾಸಿಸುತ್ತಿವೆ. ಜನರ ಹಿತ ಕಾಯಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು. ಒಂದುವೇಳೆ ಅನುಮತಿ ನೀಡಿದರೆ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು. ಪ್ರತಿಭಟನೆ ಬಳಿಕ ಡಿಸಿ ಕೆ.ಎನ್.ರಮೇಶ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಸವಿತಾ, ಹೇಮಾವತಿ, ಮೀನಾಕ್ಷಮ್ಮ, ಗಿರಿಜಮ್ಮ, ಪುಷ್ಪಾ, ಶಶಿಕಲಾ, ಕಮಲಮ್ಮ, ನೇತ್ರಾವತಿ, ಶ್ರುತಿ, ನಂದಿನಿ, ಪ್ರೇಮಾ, ಶಾಂತಮ್ಮ, ಲಕ್ಷ್ಮಮ್ಮ, ಮಂಜಮ್ಮ, ರಮ್ಯಾ, ಶಾಂತಮ್ಮ, ಗೀತಾ, ಚಂದ್ರಮ್ಮ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts