More

    ಮತ್ತೆ ನಳನಳಿಸಿದ ಹಸಿರು!

    ರೋಣ: ತಾಲೂಕಿನ ಮೆಣಸಗಿ ನವಗ್ರಾಮದಲ್ಲಿ ಕಳೆದ ಜೂನ್ ತಿಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಲಕ್ಷಾಂತರ ರೂ. ವೆಚ್ಚದಲ್ಲಿ ನೆಟ್ಟ ನಾಲ್ಕು ಸಾವಿರಕ್ಕೂ ಹೆಚ್ಚು ಬೇವಿನ ಸಸಿಗಳನ್ನು ನೆಡಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದ್ದರಿಂದ ಬಹುತೇಕ ಸಸಿಗಳು ಒಣಗಿ ಹೋಗಿದ್ದವು. ಈ ಕುರಿತು ಅ.15 ರಂದು ‘ಸೂಕ್ತ ನಿರ್ವಹಣೆ ಇಲ್ಲದೆ ಸಸಿಗಳು ಸಾವು’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ವರದಿಯಿಂದ ಎಚ್ಚೆತ್ತ ವಲಯ ಅರಣ್ಯಾಧಿಕಾರಿಗಳು ಸತ್ತ ಸಸಿಗಳನ್ನು ಕಿತ್ತು ಹೊಸ ಸಸಿಗಳನ್ನು ನೆಡುತ್ತಿದ್ದಾರೆ.

    ಅತಿಯಾಗಿ ಮಳೆಯಾದ ಕಾರಣ ತೇವಾಂಶ ಹೆಚ್ಚಾಗಿದ್ದರಿಂದ ಕಳೆದ ಜೂನ್ ತಿಂಗಳಲ್ಲಿ ನೆಟ್ಟ ಬಹುತೇಕ ಬೇವಿನ ಸಸಿಗಳು ಒಣಗಿ ಹೋಗಿದ್ದವು. ಈ ಕುರಿತು ವಿಜಯವಾಣಿಯಲ್ಲಿ ಬಂದ ವರದಿಯನ್ನು ನೋಡಿ ಒಣಗಿದ ಸಸಿಗಳ ಬದಲು ಬೇರೆ ಸಸಿಗಳನ್ನು ನೆಟ್ಟಿದ್ದೇವೆ.

    | ರಾಜು ದೊಂಡಕರ ರೋಣ ಆರ್​ಎಫ್​ಒ

    ಉದ್ಯೋಗ ಖಾತ್ರಿ ಯೋಜನೆಯಡಿ ಪ್ರವಾಹ ಪೀಡಿತ ಮೆಣಸಗಿ ನವ ಗ್ರಾಮದಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ ಸಸಿಗಳು ಬಹುತೇಕ ಒಣಗಿ ಹೋಗಿದ್ದವು. ಇದೀಗ ಅರಣ್ಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಒಣಗಿದ ಸಸಿಗಳನ್ನು ಕಿತ್ತು ಹೊಸ ಸಸಿ ನೆಟ್ಟಿದ್ದಾರೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ನೆಟ್ಟಿರುವ ಸಸಿಗಳೂ ಒಣಗುತ್ತಿದ್ದು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು

    | ಜಗದೀಶ ಬ್ಯಾಡಗಿ ರೋಣ ತಾ.ಪಂ. ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts