More

    ಮತ್ತೆ ಕಾಡುತ್ತಿದೆ ಬೆಟ್ಟಿಂಗ್ ಭೂತ

    ಹುಬ್ಬಳ್ಳಿ: ಕೋಟ್ಯಂತರ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಹು-ಧಾ ಅವಳಿ ನಗರ ಸೇರಿ ಜಿಲ್ಲೆಯಲ್ಲಿ ಬೆಟ್ಟಿಂಗ್ ಭೂತ ಪೊಲೀಸರನ್ನು ಕಾಡುತ್ತಿದೆ. ಸೆ.19ರಂದು ಯುಎಇನಲ್ಲಿ ಆರಂಭವಾಗಲಿರುವ ಐಪಿಎಲ್ ಹಬ್ಬದ ವೇಳೆ ದಂಧೆ ನಡೆಸಲು ಜೂಜುಕೋರರು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಪೊಲೀಸರು ಚಾಪೆ ಕೆಳಗೆ ತೂರಿದರೆ, ನಾವು ರಂಗೋಲಿ ಕೆಳಗೆ ತೂರುತ್ತೇವೆ ಎಂದು ವಾಮಮಾರ್ಗಗಳನ್ನು ಕಂಡುಕೊಂಡಿದ್ದಾರೆ.

    ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸಲು ಇದೀಗ ತರಹೇವಾರಿ ಆಪ್​ಗಳ ಮೊರೆ ಹೋಗಿದ್ದಾರೆ. ಐಪಿಎಲ್ ಬೆಟ್ಟಿಂಗ್, ಕ್ರಿಕೆಟ್ ಬೆಟ್ಟಿಂಗ್ ಟಿಪ್ಸ್ ಎಂಬಿತ್ಯಾದಿ ಆಪ್​ಗಳ ಮೂಲಕ ಹಾಗೂ ಹೊರ ವಲಯದಲ್ಲಿ ಮೊಬೈಲ್ ಮೂಲಕ ದಂಧೆ ನಡೆಸಲು ಸಜ್ಜಾಗಿದ್ದಾರೆ ಎನ್ನುತ್ತವೆ ಮೂಲಗಳು. ರೆಸ್ಟೋರೆಂಟ್​ಗಳಲ್ಲಿ ಐಪಿಎಲ್ ರಂಗು: ನಗರದ ಬಾರ್ ಆಂಡ್ ರೆಸ್ಟೋರೆಂಟ್, ಕ್ಲಬ್, ಹೋಟೆಲ್​ಗಳಲ್ಲಿ ಐಪಿಎಲ್ ಪಂದ್ಯ ವೀಕ್ಷಣೆಗಾಗಿ ವಿಶೇಷ ಸಿದ್ಧತೆ ನಡೆದಿದೆ. ದೊಡ್ಡ ಪರದೆ ಅಳವಡಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ತಯಾರಿ ನಡೆದಿದೆ.

    ಕಳೆದ ಬಾರಿ ಹಲವು ಬೆಟ್ಟಿಂಗ್ ಪ್ರಕರಣಗಳನ್ನು ಭೇದಿಸಲಾಗಿತ್ತು. ಈ ಬಾರಿಯೂ ಬೆಟ್ಟಿಂಗ್ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಬೆಟ್ಟಿಂಗ್ ಬಗ್ಗೆ ಮಾಹಿತಿ ಇದ್ದರೆ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು.
    | ಪಿ. ಕೃಷ್ಣಕಾಂತ ಡಿಸಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts