More

    ಮತದಾರರ ಋಣ ತೀರಿಸುವೆ : ಶಾಸಕಿ ಎಂ.ರೂಪಕಲಾ ಹೇಳಿಕೆ, ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

    ಕೆಜಿಎಫ್​: ಕಳೆದ 9 ವರ್ಷಗಳಿಂದ ಪ್ರಾಮಾಣಿಕವಾಗಿ ಜನ ಸೇವೆ ಮಾಡಿದ ಹಿನ್ನಲೆ ಮತದಾರ ಪ್ರಭುಗಳು ನನಗೆ ಅಧಿಕ ಮತ ನೀಡುವ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಪ್ರಾಮಾಣಿಕವಾಗಿ ಅವರ ಋಣ ತೀರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
    ನಗರದ ವಾರ್ಡ್​ ನಂ 22ರಲ್ಲಿ 30 ಲ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
    ೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಸೇವೆ ಮಾಡುತ್ತಿದ್ದೇನೆ. ಆದರೆ ಅನುದಾನ ಬಿಡುಗಡೆಗೊಂಡ ತಕ್ಷಣ ಕಾಮಗಾರಿ ಪ್ರಾರಂಭ ಆಗುವುದಿಲ್ಲ. ಟೆಂಡರ್​ ಪ್ರಕ್ರಿಯೆ ನಡೆಯಬೇಕು. ಅಧಿಕಾರಿಗಳು ಗುತ್ತಿಗೆದಾರರ ಬೆನ್ನು ಹತ್ತಿ ಅವರಿಂದ ಕೆಲಸ ತೆಗೆಯಬೇಕಿದೆ ಎಂದು ಹೇಳಿದರು.
    ಈಗಾಗಲೇ ಆಶೋಕನಗರ ರಸ್ತೆ, ಮಿನಿ ವಿಧಾನಸೌಧ, ತಾಲೂಕು ಪಂಚಾಯತಿ ಕಟ್ಟಡ ಕಾಮಗಾರಿಗಳು ಅಂತಿಮ ಹಂತಕ್ಕೆ ಬಂದಿದ್ದು, ಶ್ರೀವಾಗಿ ಕಟ್ಟಡಗಳ ಉದ್ಘಾಟನೆ ಮಾಡಲಾಗುವುದು. ಇನ್ನು ನಗರಸಭೆ ಸದಸ್ಯರು ಅಧಿಕಾರಿಗಳ ಬೆನ್ನು ಬಿದ್ದು ಅವರಿಂದ ಕೆಲಸವನ್ನು ಮಾಡಿಸಿದರೆ 6 ತಿಂಗಳಲ್ಲಿ ೇತ್ರದ ಅಭಿವೃದ್ಧಿಯನ್ನು ಶರವೇಗದಲ್ಲಿ ಮುನ್ನೆಡೆಸಲಾಗುವುದು ಹಾಗೂ ಅಗತ್ಯವಿರುವ ಎಲ್ಲ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.
    ಬಿಇಎಂಎಲ್​ ಕಾರ್ಖಾನೆಗೆ ಕೈಗಾರಿಕೆಗಳನ್ನು ಪ್ರಾರಂಭಿಸಲು ನೀಡಲಾಗಿದ್ದ ಎರಡು ಸಾವಿರ ಎಕರೆ ಜಮೀನಿನಲ್ಲಿ ಸದ್ಬಳಕೆ ಮಾಡಿಕೊಳ್ಳದ 997 ಎಕರೆ ಜಮೀನನ್ನು ಕೇಂದ್ರದಿಂದ ರಾಜ್ಯಕ್ಕೆ ಮರಳಿ ಪಡೆದಿದ್ದು, ಶ್ರೀದಲ್ಲೇ ನೂತನ ಕೈಗಾರಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆ. ಇದರಿಂದ ಸಾವಿರಾರು ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಅವಕಾಶಗಳು ಲಭ್ಯವಾಗಲಿವೆ ಎಂದರು.
    ನಗರಸಭೆ ಅಧ್ಯಕ್ಷ ವಳ್ಳಲ್​ಮುನಿಸ್ವಾಮಿ ಮಾತನಾಡಿ, ಕಳೆದ 10 ವರ್ಷಗಳಿಂದ ಹಿಂದುಳಿದಿದ್ದ ೇತ್ರವನ್ನು ಎಂ.ರೂಪಕಲಾ ಅವರು ಶಾಸಕಿ ಆಗಿ ಆಯ್ಕೆಯಾದ ನಂತರ ೇತ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳುತ್ತಿವೆ. ಪ್ರತಿ ವಾರ್ಡ್​ಗೆ 2 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
    ನಗರಸಭೆ ಉಪಾಧ್ಯೆ ದೇವಿಗಣೇಶ್​, ಸದಸ್ಯರಾದ ತಸ್ಲಿಂಬಾನು ಮುಜಾಯಿದ್​ಖಾನ್​, ಶಕ್ತಿವೇಲು, ಜರ್ಮನ್​, ಜಯಲ$್ಮಭಾಸ್ಕರ್​, ದಯಾಶಂಕರ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts