More

    ಮತದಾನ ಹೆಚ್ಚಳಕ್ಕೆ ಅಗತ್ಯ ಕ್ರಮ ವಹಿಸಿ


    ಯಾದಗಿರಿ: ಜಿಲ್ಲೆಯ ಪ್ರತಿ ಮತದಾನ ಕೇಂದ್ರಗಳಲ್ಲಿ ಶೇ. ನೂರರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕ ಸ್ವೀಪ್ ಸಮಿತಿಗಳು ಗ್ರಾಮೀಣ ಭಾಗದ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ವಿನೂತನ ಚಟುವಟಿಕೆ ಹಮ್ಮಿಕೊಳ್ಳುವಂತೆ ಜಿಪಂ ಸಿಇಒ ಆಗಿರುವ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಗರಿಮಾ ಪನ್ವಾರ ಸೂಚನೆ ನೀಡಿದರು.

    ಶನಿವಾರ ನಗರದ ತಾಪಂ ಕಚೇರಿಯಲ್ಲಿ ಸ್ವೀಪ್ ಚಟುವಟಿಕೆಗಳಡಿ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಯಾವುದೇ ಮತದಾರ ತನ್ನ ಮತ ಚಲಾವಣೆಯಿಂದ ಹೊರಗುಳಿಯಬಾರದು. ಮತದಾನ ಪ್ರತಿಯೊಬ್ಬ ಭಾರತಿಯನ ಸಂವಿಧಾನಾತ್ಮಕ ಹಕ್ಕು ಅದನ್ನು ಚಲಾಯಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು.

    ಇದಾದ ನಂತರ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಲಿಂಗಾಧಾರಿತ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಲಿಂಗತ್ವ ಮತ್ತು ಆಹಾರ, ಪೌಷ್ಠಿಕಾಂಶ, ಆರೋಗ್ಯ, ನೀರು ಮತ್ತು ನೈರ್ಮಲ್ಯ ಕುರಿತು ಹಮ್ಮಿಕೊಂಡ ಎರಡು ದಿನಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ, ಗ್ರಾಪಂ ಮಟ್ಟದ ಈ ಕಾರ್ಯಕ್ರಮದಡಿ ಮತದಾರರ ಕುರಿತು ಸಂಪೂರ್ಣ ಮಾಹಿತಿ ಪಡೆದು, ಪ್ರತಿ ಮನೆ-ಮನೆಗೆ ಭೇಟಿ ನೀಡುವಂತೆ ನಿದರ್ೇಶನ ನೀಡಿದರು.

    ತಾಪಂ ಕಾರ್ಯನಿವರ್ಾಹಕ ಅಕಾರಿ ಬಸವರಾಜ ಶರಬೈ, ಸಹಾಯಕ ನಿದರ್ೇಶಕ ಖಾಲಿದ್ ಅಹ್ಮದ್, ತಾಲೂಕ ಯೋಜನಾಕಾರಿ ಶಶಿಧರ ಹಿರೇಮಠ, ಶಿವರಾಯ, ಅನಸರ ಪಟೇಲ್, ಸಿಡಿಪಿಒ ಲಾಲಸಾಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts