More

    ಮತಗಟ್ಟೆ, ಮಸ್ಟರಿಂಗ್ ಕೇಂದ್ರ ಪರಿಶೀಲಿಸಿದ ಡಿಸಿ

    ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ನಗರದ ಗುಲ್ಬರ್ಗ ಉತ್ತರ, ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ವಿವಿಧ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

    ಕುಡಿಯುವ ನೀರು, ಶೌಚಗೃಹ, ವಿದ್ಯುತ್ ವ್ಯವಸ್ಥೆ, ನೆರಳಿನ ವ್ಯವಸ್ಥೆ, ವಿಶೇಷಚೇನರಿಗೆ ಅನುಕೂಲವಾಗಲು ರ‍್ಯಾಂಪ್ ವ್ಯವಸ್ಥೆ ಮಾಡಬೇಕು. ಉತ್ತರ ಕ್ಷೇತ್ರದ ಮಸ್ಟರಿಂಗ್, ಡೀ ಮಸ್ಟರಿಂಗ್ ಕೇಂದ್ರವಾದ ಅಪ್ಪಾ ಕಿಡ್ಸ್ ವರ್ಲ್ಡ್ ಶಾಲೆಗೆ, ತರಬೇತಿ ಕೇಂದ್ರ, ಆಳಂದ ಚೆಕ್ ಪೋಸ್ಟ್ ಪರಿಶೀಲಿಸಿದರು. ವಾಹನ ತಪಾಸಣೆ ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಸೂಚಿಸಿದರು.

    ಮಾರ್ಗ ಮದ್ಯೆ ಆಳಂದ ಕಾಲೋನಿಯ ಮಿಲೇನಿಯಮï ಶಾಲೆ ಮತಗಟ್ಟೆ ಸಹ ವೀಕ್ಷಿಸಿದರು. ನಂತರ ರೋಜಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸಿಇಟಿ ಮತಗಟ್ಟೆ ವೀಕ್ಷಿಸಿದರು. ದಕ್ಷಿಣ ಕ್ಷೇತ್ರದ ಮಸ್ಟರಿಂಗ್, ಡೀ ಮಸ್ಟರಿಂಗ್, ಸ್ಟಾçಂಗ ರೂ. ಎಸಿಟಿ ಎನ್.ವಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ವಿವಿಧ ಮತಗಟ್ಟೆಗಳಿಗೆ, ಪಾಲಿಕೆ ಕಚೇರಿಗೆ ಭೇಟಿ ನೀಡಿದರು. ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಉಪ ಆಯುಕ್ತ ಮಾಧವ ಗಿತ್ತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts