More

    ಮತಗಟ್ಟೆಗೇ ಬರಲು 35,917 ಮಂದಿ ಸಮ್ಮತಿ-ವಿಕಲಾಂಗರು, 80 ವರ್ಷ ಮೇಲ್ಪಟ್ಟವರ ಹುಮ್ಮಸ್ಸು

    ದಾವಣಗೆರೆ: ಚುನಾವಣಾ ಆಯೋಗ ಮನೆಯಿಂದಲೇ ಹಕ್ಕು ಚಲಾಯಿಸಲು ಅವಕಾಶ ನೀಡಿದ್ದರೂ ಎಂಬತ್ತು ವರ್ಷ ಮೇಲ್ಪಟ್ಟವರು, ದೈಹಿಕ ವಿಕಲಾಂಗರು ಸೇರಿ 35,917 ಮಂದಿ ಮತಗಟ್ಟೆಗೆ ಬಂದು ಮತ ಚಲಾಯಿಸುವ ಹುಮ್ಮಸ್ಸು ವ್ಯಕ್ತಪಡಿಸಿದ್ದಾರೆ!
    18,817 ಮಂದಿ ಹಿರಿಯ ನಾಗರಿಕರು, 17,100 ದೈಹಿಕ ಅಂಗವಿಕಲರು ಮತದಾನ ದಿನದಂದು ಮತಗಟ್ಟೆಗೆ ಬರುವ ಉತ್ಸಾಹ ತೋರಿದ್ದಾರೆ. ಇವರಲ್ಲಿ ಅಗತ್ಯವಿದ್ದವರಿಗೆ ಅಂದು ವಾಹನ ಸೌಲಭ್ಯವನ್ನೂ ಸಹ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
    ಎವಿಎಸ್‌ಸಿ ವರ್ಗದಡಿ 80 ವರ್ಷ ಮೇಲ್ಪಟ್ಟವರು ಜಿಲ್ಲೆಯಲ್ಲಿ 27566 ಮಂದಿ ಇದ್ದು, ಇದರಲ್ಲಿ 20687 ಮತದಾರರಿಗೆ 12-ಡಿ ಫಾರ್ಮ್ ವಿತರಿಸಲಾಗಿದೆ. ಸ್ಥಳಾಂತರ ಮತ್ತು ಮರಣದ ಕಾರಣಕ್ಕೆ 6879 ಜನರಿಗೆ ಈ ಫಾರ್ಮ್ ವಿತರಿಸಲಾಗಿಲ್ಲ. 1870 ಮಂದಿ ಮನೆಯಿಂದಲೆ ಅಂಚೆ ಮತದಾನಕ್ಕೆ ಸಮ್ಮತಿಸಿದ್ದಾರೆ.
    ಎವಿಪಿಡಿ ವರ್ಗದಡಿ ಗುರುತಿಸಿದ ದೈಹಿಕ ವಿಕಲಾಂಗರ ಸಂಖ್ಯೆ 19224 ಇದ್ದರೆ, ಇದರಲ್ಲಿ 17610 ಮತದಾರರಿಗೆ 12-ಡಿ ಫಾರ್ಮ್ ನೀಡಲಾಗಿದೆ. 1614 ಜನರಿಗೆ ವಿತರಣೆಯಾಗಿಲ್ಲ. 510 ಮಂದಿ ಅಂಚೆ ಮತದಾನಕ್ಕೆ ಒಪ್ಪಿದ್ದಾರೆ.
    ಇವರಿಂದ ಮತದಾನ ಮಾಡಿಸಿಕೊಳ್ಳಲು 7 ಕ್ಷೇತ್ರದಲ್ಲಿ ಮತದಾನ ಅಧಿಕಾರಿ, ಸೂಕ್ಷ್ಮ ಪರಿವೀಕ್ಷಕ, ಮತಗಟ್ಟೆ ಮಟ್ಟದ ಅಧಿಕಾರಿ, ಒಬ್ಬ ಪೊಲೀಸ್ ಸಿಬ್ಬಂದಿ, ಗ್ರೂಪ್ ಡಿ ಸಿಬ್ಬಂದಿ, ಒಬ್ಬ ವೀಡಿಯೋಗ್ರಾಫರ್ ಸೇರಿ 87 ತಂಡಗಳನ್ನು ರಚಿಸಲಾಗಿದೆ. ಏ.29, 30ರಂದು ಮತದಾನದ ಮೊದಲ ಭೇಟಿ ನಿಗದಿ ಮಾಡಲಾಗಿದೆ. ಹೊನ್ನಾಳಿ ಕ್ಷೇತ್ರದಲ್ಲಿ ಅರ್ಜಿಗಳು ಹೆಚ್ಚಿರುವ ಕಾರಣದಿಂದಾಗಿ ಅಗತ್ಯ ಬಿದ್ದಲ್ಲಿ ಮೇ 2ರಂದು ಎರಡನೇ ಭೇಟಿಗೆ ದಿನ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
    ಅಗತ್ಯ ಸೇವೆಗಳಡಿ (ಎವಿಇಎಸ್) ವರ್ಗದಡಿ 9 ಇಲಾಖೆಗಳ 605 ಮತದಾರರನ್ನು ಗುರ್ತಿಸಿದ್ದು ಇದರಲ್ಲಿ 12ಡಿ ಫಾರ್ಮ್ ನೀಡಿದ 339 ಮತದಾರರಿಗೆ ಅಂಚೆ ಮತದಾನಕ್ಕೆ ಮೇ 2ರಿಂದ 4 ರವರೆಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸಂಬಂಧಿಸಿದ ಚುನಾವಣಾಧಿಕಾರಿ ಕಚೇರಿಯಲ್ಲಿ ಕ್ರಮ ವಹಿಸಲಾಗಿದೆ. ವಿವಿಧ ಚುನಾವಣಾಧಿಕಾರಿ, ಸಿಬ್ಬಂದಿ 9935 ಮಂದಿ ಇದ್ದು ಇದರಲ್ಲಿ 12-ಡಿ ಫಾರ್ಮ್ ನೀಡಿದ 7973 ಮತದಾರರಿಗೆ ಅಂಚೆ ಮತ ಹಾಕಲು ತಯಾರಿ ಮಾಡಲಾಗಿದೆ ಎಂದರು.
    *ಜಿಲ್ಲೆಯಲ್ಲಿ 14.42 ಲಕ್ಷ ಮತದಾರರು
    ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮಗೊಂಡಿದ್ದು ಜಿಲ್ಲೆಯಲ್ಲಿ ಒಟ್ಟು 14,42,553 ಮತದಾರರಿದ್ದಾರೆ. ಇದರಲ್ಲಿ 7,21,964 ಪುರುಷರು, 7,20,0004 ಮಹಿಳೆಯರು, 118 ತೃತೀಯ ಲಿಂಗಿಗಳು, 467 ಸೇವಾ ಮತದಾರರಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲೇ ಅತಿ ಹೆಚ್ಚಿನ 2,41,278) ಮತದಾರರಿದ್ದಾರೆ.
    * 38209 ಹೆಚ್ಚುವರಿ ಸೇರ್ಪಡೆ
    ಈ ಬಾರಿ 35454 ಹೊಸ ಮತದಾರರಿದ್ದಾರೆ. ಜ6ರಿಂದ ಏ.20ರವರೆಗೆ ನಡೆಸಿದ ನಿರಂತರ ಪರಿಷ್ಕರಣೆಯಿಂದಾಗಿ 38209 ಮಂದಿ ಹೆಚ್ಚುವರಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ 17710 ಪುರುಷರು, 20492 ಮಹಿಳೆಯರು, 7 ತೃತೀಯ ಲಿಂಗಿಗಳಿದ್ದಾರೆ ಎಂದು
    * 1685 ಮತಗಟ್ಟೆ ಸ್ಥಾಪನೆ
    ಜಿಲ್ಲೆಯಲ್ಲಿ ಒಟ್ಟು 1685 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಜಗಳೂರು-262, ಹರಿಹರ-228, ದಾವಣಗೆರೆ ಉತ್ತರ- 242, ದಾವಣಗೆರೆ ದಕ್ಷಿಣ- 214 (2 ಹೆಚ್ಚುವರಿ ಕೇಂದ್ರ ಸೇರಿವೆ), ಮಾಯಕೊಂಡ-240, ಚನ್ನಗಿರಿ-254, ಹೊನ್ನಾಳಿ 245 ಮತಗಟ್ಟೆ ತೆರೆಯಕಲಾಗುತ್ತಿದೆ. 339 ಕ್ರಿಟಿಕಲ್ ಮತಗಟ್ಟೆ ಗುರ್ತಿಸಲಾಗಿದೆ.
    ಹೆಚ್ಚುವರಿ ಮತ ಯಂತ್ರಗಳೂ ಸೇರಿದಂತೆ ಜಿಲೆಯಲ್ಲಿ ಒಟ್ಟು 2029 ಬ್ಯಾಲೆಟ್ ಯುನಿಟ್, 2029 ಕಂಟ್ರೋಲ್ ಯುನಿಟ್ ಹಾಗೂ 2194 ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ಏ.30ರಂದು ಅಭ್ಯರ್ಥಿಗಳು ಮತತು ರಾಜಕೀಯ ಪಕ್ಷದವರ ಸಮುಖದಲ್ಲಿ ಮತಯಂತ್ರಗಳ ಎರಡನೇ ಹಂತದ ರ‌್ಯಾಂಡಮೈಜೇಷನ್ ನಡೆಸಲಾಗುವುದು. ಮೇ.1, 2ರಂದು ಮತಯಂತ್ರಕ್ಕೆ ಮತಪತ್ರ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.

    Related articles

    Share article

    Latest articles