More

    ಮಣ್ಣಿನ ಮೂರ್ತಿ ತಯಾರಕರಿಗೆ ಪ್ರೋತ್ಸಾಹ ನೀಡಿ

    ಬೆಳಗಾವಿ: ಬೆಳಗಾವಿಯ ಐತಿಹಾಸಿಕ ಗಣೇಶೋತ್ಸವ ಸುಸೂತ್ರವಾಗಿ ನೆರೆವೇರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಕ್ರಮಗಳ ಜತೆಗೆ ಹಿಂದು ಧರ್ಮಶಾಸದಂತೆ ಗಣೇಶಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಬೇಕು ಹಾಗೂ ಮಣ್ಣಿನ ಮೂರ್ತಿ ಮಾಡುವ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹ ದನ ನೀಡಬೇಕು ಎಂದು ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

    ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ ಸಮಿತಿ ಸದಸ್ಯರು, ಪ್ಲಾಸ್ಟರ್​ ಆಫ್​ ಪ್ಯಾರಿಸ್​, ರಸಾಯನಿಕ, ಕಾಗದ ಮುಂತಾದ ಮಾಲಿನ್ಯಕಾರ ವಸ್ತುಗಳಿಂದ ಗಣೇಶ ಮೂರ್ತಿ ತಯಾರಿಸುವ ಬದಲು, ಮುರ್ತಿಕಾರರಿಗೆ ಮಣ್ಣಿನಿಂದ ಮೂರ್ತಿ ತಯಾರಿಲು ಪ್ರೋತ್ಸಾಹ ಮತ್ತು ಅನುದಾನ ನೀಡಬೇಕು. ಹರಿಯುವ ನೀರಿನಲ್ಲಿ ಹರಿಯುವ ನೀರಿನಲ್ಲಿ ಬಿಡಲು ಹಾಗೂ ಆಲ್ಲಿ ಅಹಿತಕರ ಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ನಿರ್ಮಾಣ ಮಾಡುವುದು.

    ಹರಿಯುವ ನೀರಿನ ವ್ಯವಸ್ಥೆ ಇಲ್ಲವಾದಲ್ಲಿ ಕೆರೆ ಅಥವಾ ಸರೋವರವಿದ್ದರೆ ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬಹಳಷ್ಟು ಮಹಾನಗರಗಳಲ್ಲಿ ಲಾಂತರ ರೂಪಾಯಿ ಖರ್ಚು ಮಾಡಿ ಕೃತಕ ನೀರಿನ ಟ್ಯಾಂಕ್​ಗಳ ವಾಹನಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ, ಆದರೆ, ವಿಸರ್ಜನೆಯ ನಂತರ ನೀರು ಮತ್ತು ಗಣೇಶನ ಮೂರ್ತಿಯನ್ನು ಅಪವಿತ್ರ, ಅಯೋಗ್ಯ ಸ್ಥಳಗಳಲ್ಲಿ, ರಸ್ತೆ ಬದಿ, ಗಟಾರದಲ್ಲಿ ಬಿಸಾಡುತ್ತಿರುವುದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ.

    ಹೀಗಾಗಿ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಪಿಒಪಿ ಹಾಗೂ ರಾಸಾಯನಿಕ ಹಾಗೂ ವಿವಿಧ ಹಾನಿಕಾರದ ಕಾಗದಗಳ ಮೂರ್ತಿ ಪ್ರತಿಷ್ಠಾಪನೆ ನಿಷೆಧಿಸಬೇಕೆ ಹೊರತು ಮಣ್ಣಿನ ಮೂರ್ತಿಗಳನ್ನು ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಮಾಡುವವರಿಗೆ ಮಾಲಿನ್ಯದ ನೆಪದಿಂದ ಅವಕಾಶ ನಿರಾಕರಿಸಬಾರದು ಎಂದು ಮನವಿ ಮಾಡಿದರು.

    ಹಿಂದು ಜನಜಾಗೃತಿ ಸಮಿತಿ ಅಧ್ಯಕ್ಷ ಸುಧೀರ ಹಿರೇಕರ್​, ಪದಾಧಿಕಾರಿಗಳಾದ ಮೋಹನ ಗೌಡ, ಮಾರುತಿ ಸಲಾರ್​, ಭರತ್​ ಪಾಟೀಲ, ಉಜ್ವಲ ಗೌಡರ, ತಾರಾಬಾಯಿ ಸುತಾರ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts