More

    ಮಣಿಪುರ ಸರ್ಕಾರ ವಜಾಗೊಳಿಸಿ

    ಕುಷ್ಟಗಿ: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಹಸಿಲ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮುರಳಿಧರ್‌ಗೆ ಸಲ್ಲಿಸಿದರು.
    ಇದನ್ನೂ ಓದಿ:http://ಮಣಿಪುರ ಸರ್ಕಾರ ವಜಾಗೊಳಿಸಿ

    ಮಹಿಳೆಯರ ಜತೆಗಿನ ಅಮಾನುಷ ವರ್ತನೆ ಖಂಡನೀಯ. ಘಟನೆ ನಡೆದು 80 ದಿನಗಳಾದರೂ ಮಣಿಪುರದಲ್ಲಿ ಶಾಂತಿ ನೆಲೆಸಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ.

    ಮಣಿಪುರ ಬಿಜೆಪಿ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಶೋಚನೀಯ ಸಂಗತಿ.
    ರಾಷ್ಟ್ರಪತಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಗಲಭೆ ಹಾಗೂ ಮಹಿಳೆಯರ ರಕ್ಷಣೆ ಮಾಡುವಲ್ಲಿ ವಿಫಲವಾಗಿರುವ ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕು. ರಾಜ್ಯದಲ್ಲಿ ಶಾಂತಿ ನೆಲಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.

    ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಆರ್.ಕೆ.ದೆಸಾಯಿ, ತಾಲೂಕು ಸಮಿತಿ ಅಧ್ಯಕ್ಷೆ ಸಂಗಮ್ಮ ಗುಳಗೌಡ್ರ, ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಬಸವರಾಜ ಸಾರಥಿ, ವಿಮುಕ್ತ ದೇವದಾಸಿ ಸಂಘಟನೆಯ ಸಂಚಾಲಕ ಚಂದಾಲಿಂಗಪ್ಪ ಕಲಾಲಬಂಡಿ, ಮಲ್ಲಿಕಾರ್ಜುನಗೌಡ ಕರೆಪ್ಪಗೌಡ್ರ, ಅಕ್ಕಮ್ಮ ಮರೆಗೌಡ್ರ, ಗಂಗಮ್ಮ ಬಡಿಗೇರ, ಕವಿತಾ ಸಣ್ಣ ಸಿದ್ದಪ್ಪನವರ್, ಸಂಗಮ್ಮ ಚಳಗೇರಿ, ಅಲ್ತಾಫ್ ಪವನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts