More

    ಮಗುವಿಗೆ ರಕ್ತದಾನಿ ಹೆಸರಿಟ್ಟ ದಂಪತಿ

    ಅಕ್ಕಿಆಲೂರ: ಹೆರಿಗೆ ವೇಳೆ ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದ ಅಪರೂಪದ ಗುಂಪಿನ ರಕ್ತದಾನ ಮಾಡಿದ್ದ ಯುವಕನ ಹೆಸರನ್ನು ತಮ್ಮ ಮಗುವಿಗೆ ನಾಮಕರಣ ಮಾಡುವ ಮೂಲಕ ದಂಪತಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಹಾವೇರಿ ತಾಲೂಕಿನ ಕಬ್ಬೂರ ಗ್ರಾಮದ ನಿವಾಸಿ ಶಂಕರಪ್ಪ ಬಂಕಾಪುರ ಅವರ ಪತ್ನಿ ನಿರ್ಮಲಾ, ಮದುವೆಯಾದ 20 ವರ್ಷದ ಬಳಿಕ ಗರ್ಭಿಣಿಯಾದರು. ಆ. 6ರಂದು ಹೆರಿಗೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾಗ ಶಸ್ತ್ರಚಿಕಿತ್ಸೆಗೆ ಬಿ ನೆಗಟಿವ್ ಗುಂಪಿನ ರಕ್ತ ಅಗತ್ಯವಾಗಿತ್ತು. ಎಷ್ಟೇ ಹುಡುಕಾಡಿದರೂ, ಎಲ್ಲಿಯೂ ಬಿ ನೆಗೆಟಿವ್ ಗುಂಪಿನ ರಕ್ತ ಸಿಗದೆ ಪರಿತಪಿಸುತ್ತಿದ್ದರು. ಕೊನೆಗೆ ಪಟ್ಟಣದ ಪೊಲೀಸ್ ಪೇದೆ, ಸ್ನೇಹಮೈತ್ರಿ ಬ್ಲಡ್ ಆರ್ವಿು ಸಂಸ್ಥೆಯ ಸಂಸ್ಥಾಪಕ ಡಾ.ಕರಬಸಪ್ಪ ಗೊಂದಿ ಅವರನ್ನು ಸಂರ್ಪಸಿದ್ದಾರೆ.

    ಕರಬಸಪ್ಪ ಅವರು ಪಟ್ಟಣದ ಮಾರುತಿ ನಗರದ ಯುವಕ ರಾಕೇಶ ಉಂಡೆವಲ್ಲಿ ಅವರನ್ನು ಸಂರ್ಪಸಿ, ನಿರ್ಮಲಾ ಬಂಕಾಪುರ ಅವರ ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದ ಬಿ ನೆಗೆಟಿವ್ ರಕ್ತ ಒದಗಿಸಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ತಾಯಿ ಮತ್ತು ಮಗು ಆರೋಗ್ಯವಾಗಿದ್ದರೆ, ದಂಪತಿಗೆ ಹಲವು ವರ್ಷಗಳ ನಂತರ ಗಂಡುಮಗು ಜನಿಸಿದ್ದರಿಂದ ಕುಟುಂಬದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತುರ್ತು ಸಂದರ್ಭದಲ್ಲಿ ರಕ್ತ ಒದಗಿಸಿದ ಪಟ್ಟಣದ ಯುವಕ ರಾಕೇಶನ ಹೆಸರನ್ನೇ ಆ. 26ರಂದು ನಡೆದ ಸಮಾರಂಭದಲ್ಲಿ ಮಗುವಿಗೆ ನಾಮಕರಣ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

    ನಿತ್ಯ ಸಾಕಷ್ಟು ಜನ ರಕ್ತಕ್ಕಾಗಿ ಸಂರ್ಪಸುತ್ತಾರೆ. ಆದರೆ, ಸಂರ್ಪಸುವ ಮೊದಲು ತಮ್ಮ ಸಂಬಂಧಿಕರ ಬಳಿಯಿಂದ ರಕ್ತ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಹಾವೇರಿ ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಬೇಕಾಗುವ ಅಪರೂಪದ ರಕ್ತದ ಗುಂಪುಗಳನ್ನು ಸಂಗ್ರಹಿಸಲು ವೈಯಕ್ತಿಕವಾಗಿ ಶ್ರಮಿಸುತ್ತೇನೆ.
    | ಡಾ.ಕರಬಸಪ್ಪ ಗೊಂದಿ, ಸ್ನೇಹಮೈತ್ರಿ ಬ್ಲಡ್ ಆರ್ವಿು ಸಂಸ್ಥೆ ಸಂಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts