More

    ಮಗನ ಪರ ಪ್ರಚಾರ ಆರಂಭಿಸಿದ ಭವಾನಿ ರೇವಣ್ಣ

    ಹಾಸನ: ನಗರದ ಪಾರ್ಕ್ ರಸ್ತೆ ಬಳಿ ಇರುವ ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ವಿಶೇಷ ಪೂಜೆ ಸಲ್ಲಿಸಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬಿರುಸಿನ ಪ್ರಚಾರ ಆರಂಭಿಸಿದರು.
    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತು ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಚುನಾವಣೆಯ ಪ್ರಚಾರವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿನ ನಗರಸಭೆ ಸದಸ್ಯರ ಜೊತೆಗೂಡಿ ಎಲ್ಲಾ ಕಾರ್ಯಕರ್ತರು ಹಾಗೂ ಅಕ್ಕ-ತಂಗಿ, ತಾಯಾಂದಿರು ಬಂದಿದ್ದಾರೆ. ಶಾಸಕ ಸ್ವರೂಪ್ ಅವರ ತಾಯಿ ಲಲಿತಮ್ಮಾ ಅವರ ಜತೆಗೂಡಿ ಶ್ರೀ ರಾಮನವಮಿ ದಿನ ಒಳ್ಳೆ ದಿವಸ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಿದ್ದೇವೆ. ಅಭ್ಯರ್ಥಿ ಪ್ರಜ್ವಲ್ ರೇವಣ್ಣರಿಗೆ ಬಹುಮತ ಸಿಗಲಿ. ಎಲ್ಲಾ ಮಹಿಳೆಯರು ಅವರವರ ವಾರ್ಡಿನಲ್ಲಿ ಗುರುವಾರದಿಂದ ಮನೆ ಮನೆ ಪ್ರಚಾರವನ್ನು ಆರಂಭಿಸಲಿದ್ದಾರೆ ಎಂದರು.
    ಪಂಚಾಯಿತಿ ವ್ಯಾಪ್ತಿಯಲ್ಲೂ ಕೂಡ ಪ್ರಚಾರ ಕೈಗೊಳ್ಳಲಾಗುವುದು. ಪ್ರಜ್ವಲ್ ಬಹುಮತದೊಂದಿಗೆ ಗೆಲ್ಲುವುದರಲ್ಲಿ ಯಾವ ಸಂಶಯವು ಇಲ್ಲ. ಪ್ರಧಾನಿ ಮೋದಿ ಅವರಿಗೆ ವಿಶೇಷವಾದಂತಹ ಗೌರವ ಸ್ಥಾನಮಾನವಿದೆ. ದೇಶದಲ್ಲಿ ಒಳ್ಳೆಯ ಕೆಲಸ ಮಾಡಿ ತೋರಿಸಿದ್ದಾರೆ. ಬಿಜೆಪಿ ಪಕ್ಷ ಎನ್ನುವುದಕ್ಕಿಂತ ನಮಗೆ ಮೋದಿಜಿ ಅವರ ಬಗ್ಗೆ ಬಹಳ ಗೌರವವಿದೆ. ಬಹಳ ವರ್ಷಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಇಡೀ ದೇಶದ ಜನರು ದರ್ಶನಕ್ಕಾಗಿ ಹೋಗಿ ಬರುತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ನಮ್ಮ ಅಭ್ಯರ್ಥಿ ಮತಗಳ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
    ಇದೆ ವೇಳೆ ನಗರಸಭೆ ಮಾಜಿ ಅಧ್ಯಕ್ಷೆ ನೇತ್ರಾವತಿ ಗಿರೀಶ್, ಜೆಡಿಎಸ್ ಮುಖಂಡರಾದ ಪ್ರೇಮಮ್ಮಾ, ಪುಷ್ಪಲತಾ, ನಿರ್ಮಲಾ, ಗಿರೀಶ್ ಚನ್ನವೀರಪ್ಪ, ಮಾಧ್ಯಮ ವಕ್ತಾರ ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts