More

    ಮಕ್ಕಳ ಸಾಧನೆಗೆ ಶಿಕ್ಷಕರ ಪಾತ್ರ ಮುಖ್ಯ

    ಶಿವಶಂಕರ ಸ್ವಾಮೀಜಿ ಅಭಿಪ್ರಾಯ ಸ್ನೇಹ ಸಮ್ಮೇಳನ ಗುರುವಂದನೆ

    ರಾಯಬಾಗ: ಮಕ್ಕಳು ಉನ್ನತ ಮಟ್ಟದ ಸಾಧನೆ ಮಾಡಲು ಪಾಲಕರು ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದ್ದು, ಅವರೇ ಜೀವನದ ದಾರಿ ದೀಪ ಎಂದು ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ಹೇಳಿದರು.


    ತಾಲೂಕಿನ ಬಾನಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜಿರಾವ ಮಗದುಮ್ಮ ಪ್ರೌಢಶಾಲೆ, ಹೊಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 1998-99ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ವ್ಯಕ್ತಿಗೆ ಸಂಸ್ಕಾರ ಬಹಳ ಮುಖ್ಯ ಎಂದರು.


    ಸಂಸ್ಥೆ ಅಧ್ಯಕ್ಷ ಈರಗೌಡ ಪಾಟೀಲ ಮಾತನಾಡಿ, ಶಿಕ್ಷಣಕ್ಕೆ ಒತ್ತು ನೀಡಿ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಸಬೇಕು ಎಂದರು.
    ಶಿಕ್ಷಕರು ಹಾಗೂ ನಿವೃತ್ತ ಸೈನಿಕರನ್ನು ಸತ್ಕರಿಸಲಾಯಿತು. ಡಿ.ಆರ್. ಬೆಂಡೆ, ಎಸ್. ಎ.ಮಗದುಮ್ಮ, ಬಿ.ಬಿ. ಪಾಟೀಲ, ಎಸ್.ಡಿ. ಪವಾರ, ಪಿ.ವಿ. ನಾಯಿಕ, ಎಸ್.ಎ. ರುಪ್ಯಾಳೆ, ಎಸ್.ಬಿ. ಹಾಡಕರ, ಎನ್.ಎಂ. ಪಾಟೀಲ, ಆರ್.ಎನ್. ಪಾಟೀಲ, ಟಿ.ಡಿ. ತಮ್ಮಾಣಿಗೋಳ, ಎಸ್.ಬಿ. ಖೋಮಬಾರೆ, ಎಸ್.ಐ. ಕೊಳಕಿ, ಬಿ.ಬಿ. ಜನಾಜ, ಆನಂದ ದೇಸಾಯಿ ಇತರರಿದ್ದರು.

    ರಾಯಬಾಗ ತಾಲೂಕಿನ ಬಾನಸೌಂದತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ಶಿವಶಂಕರ ಸ್ವಾಮೀಜಿ, ಈರಗೌಡ ಪಾಟೀಲ, ಡಿ.ಆರ್.ಬೆಂಡೆ, ಎಸ್.ಎ. ಮಗದುಮ್ಮ, ಬಿ.ಬಿ. ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts