More

    ಮಕ್ಕಳಿಗೆ ವಚನಗಳ ಮಹತ್ವ ತಿಳಿಸಿ

    ಮುದ್ದೇಬಿಹಾಳ: ಪಾಲಕರು ಶರಣರ ವಚನಗಳ ಮಹತ್ವ, ತಿರುಳು ಅರಿತು ಮಕ್ಕಳಿಗೂ ತಿಳಿಸಿಕೊಡಬೇಕು. ವಚನಗಳು ಬಸವನಾಡಿನ ಭಕ್ತರಿಗೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಇರುವ ಬಸವಾಭಿಮಾನಿಗಳಿಗೆ ಅತ್ಯುಪಯುಕ್ತವಾಗಿವೆ ಎಂದು ಧಾರವಾಡ ಜಿಲ್ಲೆ ಉಪ್ಪಿನ ಬೆಟಗೇರಿಯ ಮೂರು ಸಾವಿರ ವಿರಕ್ತ ಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ ಹೇಳಿದರು.

    ಇಲ್ಲಿನ ವಿದ್ಯಾನಗರದಲ್ಲಿರುವ ಜೆಸಿ ಚಿನ್ಮಯ ಶಾಲೆಯಲ್ಲಿ ಬಸವ ಬೆಳಗು ಕಾರ್ಯಕ್ರಮದ 5ನೇ ದಿನದ ಬೆಳಗಿನ ಸಂಚಾರದ ನಂತರ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಭಾನುವಾರ ಅನುಭಾವ ನೀಡಿ ಅವರು ಮಾತನಾಡಿದರು.

    ವಚನ ಸಾಹಿತ್ಯದಂತಹ ದೊಡ್ಡ ಸಂಪತ್ತು ಮತ್ತೊಂದಿಲ್ಲ. ನಾವೆಲ್ಲರೂ ವಚನ ಸಾಹಿತ್ಯವನ್ನು ರಕ್ಷಿಸಿ, ಉಳಿಸಿ, ಬೆಳೆಸಬೇಕು. ಇಂದಿಗೂ ಕೂಡ ಆಂಧ್ರಪ್ರದೇಶದಲ್ಲಿ ಬಸವ ಪುರಾಣ, ವಚನಗಳನ್ನು ಅಲ್ಲಿನ ಜನತೆ ಕೇಳುತ್ತಿದ್ದಾರೆ. ವಚನಗಳು ನಮ್ಮ ಬಾಳಿಗೆ ದಾರಿದೀಪ ಅನ್ನೋದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದರು.

    ಸ್ವಾಮೀಜಿ ಎಂದಿನಂತೆ ತಮ್ಮ 5ನೇ ದಿನದ ಬೆಳಗಿನ ಸಂಚಾರವನ್ನು ನಸುಕಿನ 5 ಗಂಟೆಗೆ ಸಿಬಿಎಸ್‌ಇ ಶಾಲೆಯ ಗೇಟ್‌ನಿಂದ ಪ್ರಾರಂಭಿಸಿ ವಾಟರ್ ಟ್ಯಾಂಕ್, ಅಭ್ಯುದಯ ಕಾಲೇಜ್, ವಿದ್ಯಾಸ್ಫೂರ್ತಿ ಶಾಲೆ ಮಾರ್ಗವಾಗಿ ಜೆಸಿ ಶಾಲೆಯ ಮೈದಾನಕ್ಕೆ ಆಗಮಿಸಿ ಅನುಭಾವದೊಂದಿಗೆ ದಿನದ ಸಂಚಾರ ಮುಕ್ತಾಯಗೊಳಿಸಿದರು.

    ಪರಿಸರ ರಕ್ಷಣೆಗೆ ಪರಿಸರ ಪ್ರಿಯರನ್ನು ಕಟ್ಟಿಕೊಂಡು ಗಿಡ ಮರ ಉಳಿವಿಗಾಗಿ, ಬೆಳೆಸುವುದಕ್ಕಾಗಿ ಪರಿಸರ ಸೇವೆಯ ಮುಂದಾಳತ್ವ ವಹಿಸುತ್ತಿರುವ ಪೋಸ್ಟ್ ಮಾಸ್ಟರ್ ಮಹಾಬಲೇಶ್ವರ ಗಡೇದ ಅವರ ನಿಸ್ವಾರ್ಥ ಕಾರ್ಯವನ್ನು ಸ್ವಾಮೀಜಿ ಶ್ಲಾಘಿಸಿದರು.

    ಬಸವ ಬೆಳಗು ಕಾರ್ಯಕ್ರಮದ ಸಂಚಾಲಕ- ಮುಖ್ಯಾಧ್ಯಾಪಕ ರುದ್ರೇಶ ಕಿತ್ತೂರ ಕಾರ್ಯಕ್ರಮ ನಿರ್ವಹಿಸಿದರು. ಮಾರ್ಗಮಧ್ಯೆ ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಅವರು ಕುಟುಂಬ ಸಮೇತರಾಗಿ ಸ್ವಾಮೀಜಿ ಅವರನ್ನು ಸತ್ಕರಿಸಿದರು. ಸ್ವಾಮೀಜಿ ಅವರು ಮರಳಿ ಗೌಡರ ಅವರಿಗೆ ಹೂಮಾಲೆ ಹಾಕಿ ಆಶೀರ್ವದಿಸಿದರು. ಮನೆಯಲ್ಲಿ ಮಹಾಮನೆ ಬಳಗ, ಶರಣ ಸಾಹಿತ್ಯ ಪರಿಷತ್ತಿನ ಬಳಗ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪುರಾಣ ಪ್ರವಚನ ಸಮಿತಿಯ ಮುಖಂಡರು, ಆಯಾ ಬಡಾವಣೆಗಳ ಭಕ್ತರು ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts