More

    ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ

    ಬಾಗಲಕೋಟೆ: ೧೨ನೇ ಶತಮಾನದಲ್ಲಿ ಕಾಯಕ-ದಾಸೋಹ ಪರಂಪರೆ ಹೊಸ ಕ್ರಾಂತಿ ಉಂಟು ಮಾಡಿತು. ಮೇದಾರ ಕೇತಯ್ಯನವರು ತಮ್ಮ ಕಾಯಕ ಸಿದ್ದಾಂತದ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುನ್ನುಡಿ ಬರೆದರು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
    ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೇದಾರ ಕೇತಯ್ಯನವರ ೮೯೨ ಜಯತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸಮಾಜ ಬಾಂಧವರು ಸರ್ಕಾರ ಸೌಲಭ್ಯ ಪಡೆದು ಪ್ರಗತಿ ಕಾಣಬೇಕು. ಪ್ರತಿಯೊಬ್ಬರು ಶಿಕ್ಷಣ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಸರ್ಕಾರ ಎಸ್ಟಿ ಮೀಸಲಾತಿ ಹೆಚ್ಚಿಸಿದೆ ಎಂದರು.
    ಕಾಯಕದಿಂದ ಮೇಲು ಕೀಳು ಎಂಬ ಭಾವನೆ ಇದೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ ಮೂಲ ವೃತ್ತಿ ಮುಂದುವರೆಸಿಕೊಂಡಬೇಕು. ಕಾನೂನು ಬದ್ಧವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಛಲವಿದ್ದರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತೆ. ಪ್ರಯತ್ನ ಶೀಲರಾಗಿ ಕಾರ್ಯನಿರ್ವಸಬೇಕು. ದೇಶದಲ್ಲಿ ೬ ಸಾವಿರಕ್ಕೊ ಹೆಚ್ಚು ಜಾತಿಗಳಿವೆ. ತಮ್ಮ ಸಮಾಜಕ್ಕೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು.
    ಕಾರ್ಯಕ್ರಮಕ್ಕೂ ಮುನ್ನ ಮೇದಾರ ಕೇತಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿರೇಶ್ವರ ಸ್ವಾಮಿಜಿ ಸಾನಿಧ್ಯವಹಿಸಿದ್ದರು. ಬುಡಾ ಸದಸ್ಯ ರಾಜು ನಾಯ್ಕರ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಮುಖಂಡರಾದ ಮಹಾದೇವ ಬುಡ್ಡರ, ಚಂದ್ರಶೇಖರ ಬುಡ್ಡರ, ಬರಮಣ್ಣಾ ಬುಡ್ಡರ, ಚನ್ನಬಸು ಬುಡ್ಡರ, ಅಯ್ಯಪ್ಪ ಮೇದಾರ, ಆನಂದ ಬುಡ್ಡರ, ಮಲ್ಲಪ್ಪ ಮೇದಾರ ಸೇರಿದಂತೆ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts