More

    ಮಕ್ಕಳಿಗೆ, ಉನ್ನತ, ಶಿಕ್ಷಣ, ಕೊಡಿಸಿ


    ಯಾದಗಿರಿ: ಕಳೆದ ಐದು ತಿಂಗಳ ಹಿಂದೆ ಗುರುಮಠಕಲ್ ಕ್ಷೇತ್ರದ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಮೂರು ಜನರ ಕುಟುಂಬಗಳಿಗೆ ಶಾಸಕ ಶರಣಗೌಡ ಕಂದಕೂರ ಸಕರ್ಾರದಿಂದ ಬಿಡುಗಡೆಯಾದ ತಲಾ 5 ಲಕ್ಷ ರೂ.ಗಳ ಚೆಕ್ಗಳನ್ನು ಬುಧವಾರ ವಿತರಿಸಿದರು.,

    ಈ ವೇಳೆ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಇಂಥ ಘಟನೆ ನಡೆದಿರುವುದು ಸಾಕಷ್ಟು ನೋವು ತರಿಸಿದೆ. ಘಟನೆ ನಡೆದಾಗ ನಮ್ಮ ತಂದೆ ನಾಗನಗೌಡ ಕಂದಕೂರ ಶಾಸಕರಾಗಿದ್ದರು. ಅಲ್ಲದೆ, ಅಂದಿನ ವಿಧಾನಸಭೆ ಅವೇಶನದಲ್ಲಿ ಈ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಸಕರ್ಾರದ ಗಮನ ಸೆಳೆದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಅಲ್ಲದೆ ವೈಯಕ್ತಿಕ ಪರಿಹಾರ ಸಹ ನೀಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಸಕರ್ಾರದ ಪರಿಹಾರ ಬಿಡುಗಡೆಯಾಗಲು ತಡವಾಗಿತ್ತು ಎಂದು ವಿವರಿಸಿದರು.

    ನಾನು ಶಾಸಕನಾದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿರಂತರ ಭೇಟಿ ಮಾಡಿ, ಮೂರು ಕುಟುಂಬಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದೆ. ಮೊನ್ನೆ ಜರುಗಿದ ಅವೇಶನದಲ್ಲೂ ಸಹ ಈ ವಿಷಯ ಪ್ರಸ್ತಾಪ ಮಾಡಿದ ನಂತರ ಸ್ವತಃ ಸಿಎಂ ಅವರೇ ಖುದ್ದಾಗಿ ಸಕರ್ಾರದ ಮುಖ್ಯ ಕಾರ್ಯದಶರ್ಿಗಳಿಗೆ ಸೂಚಿಸಿ ಪರಿಹಾರ ಧನ ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಕ್ಷೇತ್ರದ ಜನರ ಪರವಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.

    ಈ ಹಣದಿಂದ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ. ಹಣವನ್ನು ದುಂದು ವೆಚ್ಚ ಮಾಡದೆ ಜೀವನ ನಿರ್ವಹಣೆಗೆ ಬಳಸಿಕೊಳ್ಳಲಿ ಎಂದು ಸಲಹೆ ನೀಡಿದ ಶಾಸಕರು, ಸದ್ಯ ಎಲ್ಲೆಡೆ ಮಳೆಯಾಗುತ್ತಿದೆ. ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಅಕಾರಿಗಳು ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಸಹಾಯಕ ಆಯುಕ್ತ ಡಾ.ಹಂಪ್ಪಣ್ಣ ಸಜ್ಜನ್, ತಹಸಿಲ್ದಾರ್ ಮೊಸೀನ್, ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಾರಡ್ಡಿ ಅನಪುರ, ಪ್ರಮುಖರಾದ ಕೃಷ್ಣಾರಡ್ಡಿ ಪಾಟೀಲ್, ಅಜಯರಡ್ಡಿ ಯಲ್ಹೇರಿ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಪ್ರಕಾಶ ನಿರೇಟ್ಟಿ, ಆಶಣ್ಣ ಬುದ್ಧ, ರಾಜೇಶ ಮಿನಾಸಪುರ, ಮುಕುಂದರಡ್ಡಿ ನಸಲವಾಯಿ, ಆನಂದ ವಡವಟ್, ನರಸಿಂಹರಡ್ಡಿ ಅನಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts