More

    ಮಕ್ಕಳಲ್ಲಿ ಕ್ರೀಡೆ ಚೈತನ್ಯ ತುಂಬಲಿದೆ

    ಚಿತ್ರದುರ್ಗ: ಮಾನಸಿಕ, ದೈಹಿಕವಾಗಿ ಸದೃಢವಾಗುವಲ್ಲಿ ಕ್ರೀಡೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬಲು ಸಹಕಾರಿಯಾಗಿದೆ ಎಂದು ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ್ ಹೇಳಿದರು.

    ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಶುಕ್ರವಾರ ವಿದ್ಯಾವಿಕಾಸ ವಿದ್ಯಾಸಂಸ್ಥೆಯ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

    ಶಾಲೆಯು ವಿದ್ಯೆಯ ಜೊತೆಗೆ ಕ್ರೀಡೆಗಳಲ್ಲೂ ಆಸಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ರೀತಿಯಿಂದಲೂ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

    ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್ ಮಾತನಾಡಿ, ಕ್ರೀಡೆಗಳು ಮಾನವನ ಉಗಮದಿಂದಲೂ ಸೃಜನಾತ್ಮಕ ಕೌಶಲ, ಸರ್ವಾಂಗೀಣ ಬೆಳವಣಿಗೆ, ಸ್ಪರ್ಧಾತ್ಮಕ ಮನೋಭಾವ, ಶಿಸ್ತು ಬದ್ಧ ಜೀವನ, ಕ್ರಿಯಾತ್ಮಕವಾಗಿ ಹೊರಹೊಮ್ಮಲು ಅತ್ಯಂತ ಸಹಕಾರಿಯಾಗಿದೆ ಎಂದರು.

    ಇದೇ ವೇಳೆ ವಾಸುದೇವರಾಮ್, ಕ್ರೀಡಾ ಕ್ಷೇತ್ರದ ಸಾಧಕ ಸಾದಿಕ್ ವುಲ್ಲಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಿಂದ ಯೋಗ, ಅನಿತಾ ಮುಂದಾಳತ್ವದಲ್ಲಿ ಟೆಕ್ವಾಂಡೋ ಪ್ರದರ್ಶನ ನಡೆಯಿತು. 6ರಿಂದ 9ನೇ ತರಗತಿ ವಿದ್ಯಾರ್ಥಿಗಳ ಸಮೂಹ ನೃತ್ಯ ನೋಡುಗರ ಗಮನ ಸೆಳೆಯಿತು. ವಿದ್ಯಾರ್ಥಿ ನಾಯಕಿ ಜಿ.ಬಿ.ಸಾಧನಾ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.

    ಸಂಸ್ಥೆಯ ನಿರ್ದೇಶಕರಾದ ಎಸ್.ಎಂ.ಪೃಥ್ವೀಶ್, ಸುನಿತಾ ವಿಜಯಕುಮಾರ್, ಅಕಾಡೆಮಿಕ್ ಆಡಳಿತಾಧಿಕಾರಿ ಡಾ.ಕೆ.ಎನ್.ಸ್ವಾಮಿ, ಮುಖ್ಯಶಿಕ್ಷಕ ಸಿ.ಡಿ.ಸಂಪತ್‌ಕುಮಾರ್, ಐಸಿಎಸ್‌ಇ ಪ್ರಾಚಾರ್ಯ ಪಿ.ಬಸವರಾಜಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts