More

    ಮಕ್ಕಳನ್ನು ಸತ್ಪ್ರಜೆಗಳಾಗಿಸುವ ಜವಾಬ್ದಾರಿ ಶಿಕ್ಷಕರದ್ದು

    ತೆಲಸಂಗ: ಮಕ್ಕಳ ಹೃದಯದಲ್ಲಿ ಏನನ್ನು ಬಿತ್ತುತ್ತೇವೆಯೋ ಅದನ್ನೇ ಪ್ರತಿಫಲವಾಗಿ ನಾವು ಪಡೆಯುತ್ತೇವೆ ಎಂದು ವಿಶ್ವಚೇತನ ಶಾಲೆಯ ಅಧ್ಯಕ್ಷ ಐ.ಎನ್.ಇಂಚಗೇರಿ ಹೇಳಿದರು. ಗ್ರಾಮದ ವಿಶ್ವಚೇತನ ಶಾಲೆಯಲ್ಲಿ ಸೋಮವಾರ ಜರುಗಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,ಚಿಕ್ಕ ಮಕ್ಕಳನ್ನು ತಿದ್ದಿ ತೀಡಿ ಸಮಾಜದ ಸತ್ಪ್ರಜೆಯನ್ನಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸರ್ಕಾರ ನೀಡುವ ಸಂಬಳಕ್ಕೆ ನ್ಯಾಯ ಒದಗಿಸಬೇಕು ಎಂದರು. ವಕೀಲ ಚಂದ್ರಕಾಂತ ಉಂಡೋಡಿ ಮಾತನಾಡಿ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಬೋಧಿಸಬೇಕು ಮೌಲ್ಯವಿಲ್ಲದ ಶಿಕ್ಷಣ ಮಹಾಪಾಪ ಎಂದರು. ಯುವ ಮುಖಂಡ ಅನೂಲ ಕೋಡ್ನಿ, ರಾಜು ಹೊನಕಾಂಬಳೆ, ಧರೆಪ್ಪ ಮಾಳಿ, ಗುಂಡು ಪವಾರ, ವಿನೋದ ಪಾಟೀಲ, ಗಣಪತಿ ಬೋರಾಡೆ, ಮಾಳಪ್ಪ ಟೋಪಣಗೋಳ, ಡಾ.ಎಸ್.ಆಯ್.ಇಂಚಗೇರಿ ಸೇರಿದಂತೆ ಶಿಕ್ಷಕ ಸಿಬ್ಬಂದಿ ಇದ್ದರು.

    ಅರಟಾಳ ವರದಿ: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದು ಶಿಕ್ಷಕ ಎಸ್. ಬಿ. ಇಸರಗೊಂಡ ಹೇಳಿದರು. ಗ್ರಾಮದ ಘಾಟಗೆ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ದಿನಾಚಾರಣೆ ಸಮಾರಂಭದಲ್ಲಿ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸರ್ಕಾರ ಮಕ್ಕಳ ಅಭಿವೃದ್ಧಿ ಗೋಸ್ಕರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಮಗ್ರ ಶಿಶು ಅಭಿವದ್ಧಿ ಯೋಜನೆ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಕ್ಷೀರ ಭಾಗ್ಯ, ಭಾಗ್ಯಲಕ್ಷ್ಮೀ, ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿವೆ ಎಂದರು. ಎಸ್.ಕೆ. ಭದ್ರಗೊಂಡ, ಬಿ.ಬಿ. ಚವ್ಹಾಣ, ಪಿ.ಬಿ. ತಳಕೇರಿ, ಎಚ್.ಎಸ್. ಬೆಟಗೇರಿ, ಜಿ.ಎಂ. ಯಲಶೆಟ್ಟಿ, ಎಸ್.ಎಚ್. ಪೂಜಾರಿ, ಎಸ್. ಈ. ಹತ್ತಿ ಇತರರು ಇದ್ದರು.

    ಐಗಳಿ ವರದಿ: ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಆದರ್ಶ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎ.ಎಸ್.ತೆಲಸಂಗ ಹೇಳಿದರು.

    ಇಲ್ಲಿನ ಆದರ್ಶ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮುಖ್ಯ ಶಿಕ್ಷಕ ಡಿ.ಎಲ್.ಕದಂ, ಶಿಕ್ಷಕರಾದ ವೈ.ಎಸ್.ಭಜಂತ್ರಿ ಹಾಗೂ ಎಂ.ಎಚ್.ನದ್ಾ ಮಾತನಾಡಿದರು. ಮಕ್ಕಳಿಂದ ದೇಶದ ಕುರಿತಾಗಿ ಭಾಷಣ, ಆಟೋಟ ಮನರಂಜನಾ ಕಾರ್ಯಕ್ರಮ ಜರುಗಿದವು. ಶಿಕ್ಷಕಿಯರಾದ ಎನ್.ಎಂ.ಬಣಜ, ಜಿ.ಪಿ.ಕಾಳಗಿ, ವಿ.ಡಿ.ಹಡಪದ, ಕೆ.ಎ.ಮುಜಾವರ, ಜೆ.ಯು.ಕನಶೆಟ್ಟಿ, ಎ.ಬಿ.ಡವಳೆ, ಪೂಜಾ ಚಮಕೇರಿ, ದಾನಮ್ಮ ತೆಲಸಂಗ, ಎಂ.ಬಿ.ಪಾಟೀಲ, ರೇಣುಕಾ.ಜೆ., ಅಮೃತಾ ಬಡಿಗೇರ, ಶೃತಿ ತೆಲಸಂಗ, ಕಾವ್ಯಾ.ಎಂ., ಪ್ರಕಾಶ ಹಳ್ಳಿ, ಬಿ.ಡಿ.ಲವಂಗಿ, ಎಂ.ಎಸ್.ಮಾಕಾಣಿ, ಎ.ಬಿ.ಶಿರಹಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts