More

    ಮಕ್ಕಳನ್ನು ಕಲೆ, ಸಾಹಿತ್ಯದ ಕಡೆಗೆ ಆಕರ್ಷಿಸಿ

    ಚನ್ನರಾಯಪಟ್ಟಣ: ಮನುಷ್ಯ ಬದುಕಿನಲ್ಲಿ ಪರಿಪೂರ್ಣತೆ ಸಾಸಲು ಸಾಹಿತ್ಯ ಅತ್ಯವಶ್ಯಕ. ಮಕ್ಕಳನ್ನು ಚಿಕ್ಕವರಿದ್ದಾಗಲೇ ಕಲೆ, ಸಾಹಿತ್ಯದ ಕಡೆಗೆ ಆಕರ್ಷಿಸುವ ಕೆಲಸವನ್ನು ಶಿಕ್ಷಕರು ಹಾಗೂ ಪಾಲಕರು ಮಾಡಬೇಕು ಎಂದು ರಂಗಭೂಮಿ ಕಲಾವಿದ, ಚಲನಚಿತ್ರ ನಟ ನೀನಾಸಂ ಅಶ್ವತ್ಥ್ ಸಲಹೆ ನೀಡಿದರು.

    ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕವಿಗೋಷ್ಠಿಯಲ್ಲಿ ಅತಿಥಿಯಾಗಿ ಆಗಮಿಸಿ ಮಂಗಳವಾರ ಮಾತನಾಡಿದರು.

    ನಾಡಿನ ನಾನಾ ಸಾಹಿತ್ಯ ಪಂಥಗಳ ನಡುವೆ ಮಕ್ಕಳ ಸಾಹಿತ್ಯ ಬೆಳೆಸುವ ಕೆಲಸವನ್ನು ಮಕ್ಕಳ ಸಾಹಿತ್ಯ ಪರಿಷತ್ ಮಾಡುತ್ತಿದೆ. ರಾಜ್ಯದಲ್ಲೇ ಮಕ್ಕಳ ಸಾಹಿತ್ಯ ಪರಿಷತ್ ಎಂಬ ಕಲ್ಪನೆ ಹುಟ್ಟು ಹಾಕಿರುವ ಇಲ್ಲಿನ ಶ್ರೇಷ್ಠ ಮನಸ್ಸುಗಳಿಗೆ ನೂರು ನಮನಗಳು. ಕಥೆ, ಕವನ ಕಟ್ಟುವ ಕೆಲಸವನ್ನು ಮಕ್ಕಳಲ್ಲಿ ತುಂಬಿ ಅದನ್ನು ಪೋಷಿಸುವ ಕೆಲಸ ಮಾಡುವ ಇಂತಹ ಕಾರ್ಯಕ್ರಮಗಳು ನಾಡಿಗೆ ಅಪರೂಪವಾದದ್ದು. ಮಕ್ಕಳ ಸಾಹಿತ್ಯ ಪರಿಷತ್ತಿನ ಕೆಲಸ ನಿತ್ಯ, ನಿರಂತರವಾಗಿರಲಿ ಎಂದರು.

    ಸಮ್ಮೇಳನದ ಸಹ ಅಧ್ಯಕ್ಷೆ, ಕವಿಗೋಷ್ಠಿಯ ಅಧ್ಯಕ್ಷೆ, ಶಾಲಿನಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿನಿ ರಕ್ಷಿತಾ ಮಾತನಾಡಿ, ಕಿವಿಗೆ ಇಂಪಾದ ಭಾಷೆ ಕನ್ನಡ, ಕನ್ನಡಮ್ಮನ ಮಕ್ಕಳಾಗಿ ಹುಟ್ಟಿರುವ ನಾವು ಧನ್ಯರು. ಇಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ನೂರಾರು ಕವಿಗಳು ಸಾವಿರಾರು ಕವಿತೆ, ಕವನ, ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ಓದಿ ಆರಾಸುವ ಕೆಲಸ ನಮ್ಮದಾಗಬೇಕು ಎಂದರು.

    ತಾಲೂಕಿನ ನಾನಾ ಶಾಲೆಗಳ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ರಚಿಸಿದ ಕವಿತೆ, ಕವನಗಳನ್ನು ಕವಿಗೋಷ್ಠಿಯಲ್ಲಿ ವಾಚಿಸಿದರು. ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಜಿ.ಪಂ. ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಪುರಸಭೆ ಸದಸ್ಯ ಸಿ.ಎನ್.ಶಶಿಧರ್, ವೈದ್ಯ, ಡಾ.ನಾಗೇಶ್, ನವೋದಯ ಸಂಸ್ಥೆ ಅಧ್ಯಕ್ಷ ಆದಿಶೇಷಕುಮಾರ್, ಕಾರ್ಯದರ್ಶಿ ನವೀನ್, ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ನಟೇಶ್, ಶಿವಮೊಗ್ಗ ಜಿಲ್ಲಾಧ್ಯಕ್ಷ ರವಿರಾಜ್‌ಸಾಗರ್, ಬಳ್ಳಾರಿಯ ಪ್ರಸನ್ನ ದೇವಮಠ್, ಚಿಕ್ಕಮಗಳೂರು ಜಿಲ್ಲೆಯ ಮಲ್ಲಿಗೆ ಸುೀರ್, ದಾವಣಗೆರೆ ಜಿಲ್ಲಾಧ್ಯಕ್ಷ ಡಾ.್ರಾನ್ಸಿಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts