More

    ಮಂಗಗಳ ಹಾವಳಿಯಿಂದ ಹೈರಾಣಾದ ಜನತೆ



    ಶಿರಹಟ್ಟಿ: ಪಟ್ಟಣದ ಫಕೀರೇಶ್ವರನಗರ, ವಿದ್ಯಾನಗರ ಸೇರಿ ಕೆಲ ಬಡಾವಣೆಗಳಲ್ಲಿ ಮಂಗಗಳ ಹಾವಳಿ ಮಿತಿಮೀರಿದೆ. ಇದರಿಂದ ಸ್ಥಳೀಯ ನಾಗರಿಕರಲ್ಲಿ ಆತಂಕ ಹೆಚ್ಚಿದ್ದು, ಪ್ರಾಣಾಪಾಯದ ಘಟನೆ ನಡೆಯುವ ಮೊದಲೇ ಅರಣ್ಯ ಇಲಾಖೆ, ಸ್ಥಳೀಯ ಪಪಂ ಅಧಿಕಾರಿಗಳಾಗಲಿ ಕೋತಿಗಳ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ.

    ಮೊದಲೆಲ್ಲ ರೈತರ ಹೊಲಗಳಲ್ಲಿ ಶೇಂಗಾ, ಕಡಲೆ, ಗೋವಿನಜೋಳ ಒಕ್ಕಲಿ ಜೋರಾಗಿ ನಡೆದಿದ್ದರಿಂದ ಮಂಗಗಳ ಚಿತ್ತ ರೈತರ ಕಣಗಳತ್ತ ನೆಟ್ಟಿತ್ತು. ಆದರೆ, ಒಕ್ಕಲಿ ಕೆಲಸಕ್ಕೆ ವಿರಾಮ ಬಿದ್ದಿದ್ದರಿಂದ ಅವು ಪಟ್ಟಣ ಪ್ರದೇಶಗಳತ್ತ ಮುಖ ಮಾಡಿದ್ದು, ಕಳೆದೊಂದು ತಿಂಗಳಿಂದ ಅವುಗಳ ಹಾವಳಿ ಹೇಳತೀರದಾಗಿದೆ.

    ನಿತ್ಯ ಬೆಳಗಾಗುತ್ತಿದಂತೆ ಪಟ್ಟಣದ ಹೊರವಲಯದಲ್ಲಿನ ಬಡಾವಣೆಗಳ ರಸ್ತೆ ಬದಿಯ ಗಿಡಗಳಲ್ಲಿ ಗುಂಪುಗುಂಪಾಗಿ ಸೇರಿ ನಂತರ ಕಾಂಪೌಂಡ್, ಛಾವಣಿಗಳ ಆಶ್ರಯ ಪಡೆಯುತ್ತವೆ. ಅಪ್ಪಿ ತಪ್ಪಿ ಮನೆ ಬಾಗಿಲು ತೆರೆದಿದ್ದರೆ ಸಾಕು ಸದ್ದಿಲ್ಲದೇ ಒಳ ಪ್ರವೇಶಿಸಿ ಗೃಹೋಪಯೋಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ಮನೆ ಮಾಳಿಗೆ ಇಲ್ಲವೇ ಅಂಗಳಲ್ಲಿ ಒಣಗಿಸಲು ಹಾಕಿದ ಹಪ್ಪಳ, ಶಾಂಡಿಗೆ, ಕಾಳು ಕಡಿ ಇತ್ಯಾದಿ, ದವಸ ಧಾನ್ಯ ತಿಂದು, ತೆಗೆದುಕೊಂಡು ಹೋಗಿ ಎಸೆಯುತ್ತವೆ.

    ಎಲ್ಲೆಂದರಲ್ಲಿ ಜಿಗಿಯುವುದರಿಂದ ಮನೆಯ ವಿದ್ಯುತ್ ಸಂಪರ್ಕದ ತಂತಿ ಹರಿದು ಬೀಳುವುದು, ನೀರಿನ ಟ್ಯಾಂಕ್, ಟಿವಿ ಬುಟ್ಟಿ, ಸೋಲಾರ್ ಪ್ಲೇಟ್​ಗಳು ಮಂಗಗಳ ಹಾವಳಿಗೆ ತುತ್ತಾಗುತ್ತಿವೆ. ಪಟಾಕಿ ಸಿಡಿಸಿ, ಸಿಡಿ ಮದ್ದು ಹಾರಿಸಿದರೂ ಅವುಗಳ ಕಾಟ ತಪ್ಪುತ್ತಿಲ್ಲ. ಪ.ಪಂ. ಮುಖ್ಯಾಧಿಕಾರಿ ಹಾಗೂ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

    | ಸತೀಶ ಮುಧೋಳಕರ, ಚಂದ್ರು ಸ್ವಾಮಿ, ಅಜಮತಲಿ ಮಕಾನದಾರ, ಮಂಜುನಾಥ ಬಕ್ಸದ್ ಸ್ಥಳಿಯರು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts