More

    ಭ್ರಷ್ಟಾಚಾರ ನಡಿತಿದ್ದರೂ ಆಡಳಿತ ಯಂತ್ರಾಂಗ ಮೌನ

    ಬಾಗೇಪಲ್ಲಿ: ತಾಲೂಕಿನ ಬಹುತೇಕ ಎಲ್ಲ ಇಲಾಖೆಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಆಡಳಿತ ಯಂತ್ರಾಂಗ ಮೌನಕ್ಕೆ ಶರಣಾಗಿದೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

    ತಾಲೂಕು ಕಚೇರಿ ಎದುರು ಸೋಮವಾರ ಪ್ರಜಾ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದಲೂ ಯಾವುದೇ ದರಖಾಸ್ತು ಸಮಿತಿ ರಚನೆಯಾಗಿಲ್ಲ. ಬಗರ್ ಹುಕುಂ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸುತ್ತಿದ್ದರೂ ಯಾರಿಗೂ ಭೂಮಿ ಮಂಜೂರಾಗಿಲ್ಲ, ಇದೆಲ್ಲ ಆಡಳಿತ ಯಂತ್ರಾಂಗದ ನಿರ್ಲಕ್ಷ್ಯ ಎಂದು ಕಿಡಿಕಾರಿದರು.

    ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಜನಪ್ರತಿನಿಧಿಗಳೂ ಮೌನವಾಗಿದ್ದಾರೆ, ಸರ್ಕಾರಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಜತೆಗೆ ಲಂಚವನ್ನೂ ನೀಡಬೇಕು, ಆಗ್ರ ಮಾತ್ರ ಕೆಲಸವಾಗುತ್ತದೆ ಎಂದು ಆರೋಪಿಸಿದರು.

    ಚೇಳೂರು ಹೋಬಳಿಯನ್ನು ತಾಲೂಕನ್ನಾಗಿ ಘೋಷಿಸಿ 2 ವರ್ಷ ಕಳೆದರೂ ಗಡಿ ಗುರುತಿಸಿಲ್ಲ. ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಕೈಗೊಳ್ಳುತ್ತಿಲ್ಲ. ಈಗಲಾದರೂ ಆಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.

    ತಹಸೀಲ್ದಾರ್ ಎಂ.ನಾಗರಾಜು ಮತ್ತು ತಾಪಂ ಇಒ ಎಚ್.ಎನ್.ಮಂಜುನಾಥಸ್ವಾಮಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾನಿರತರು ಬೈಕ್ ರ‌್ಯಾಲಿ ನಡೆಸಿದರು.

    ಪ್ರಜಾ ಸಂಘರ್ಷ ಸಮಿತಿ ಸಹ ಸಂಚಾಲಕರಾದ ಚನ್ನರಾಯಪ್ಪ, ಆರ್.ಎನ್.ರಾಜು, ಜಿಲ್ಲಾ ಸಮಿತಿ ಸದಸ್ಯರಾದ ವೆಂಕಟೇಶ್, ಚಂದ್ರಶೇಖರರೆಡ್ಡಿ, ಜೈನಾಭಿ, ಜುಬೇರ್, ಎಚ್.ಎನ್.ಚಂದ್ರಶೇಖರರೆಡ್ಡಿ, ನಾರಾಯಣಸ್ವಾಮಿ, ಚಲಪತಿ, ಭಾಷಾ, ಬಯ್ಯರೆಡ್ಡಿ, ಜಿ.ಎಂ.ರಾಮಕೃಷ್ಣಪ್ಪ, ಮಧು, ಫಯಾಜ್, ಅಶ್ವತ್ಥ್ತಪ್ಪ, ಶಿವಪ್ಪ, ನರಸಿಂಹಾರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts