More

    ಭ್ರಷ್ಟಾಚಾರಮುಕ್ತ ಆಡಳಿತ ನೀಡಲು ಅವಕಾಶ ನೀಡಿ:ಪಕ್ಷೇತರ ಅಭ್ಯರ್ಥಿ ಜೆ.ಡಿ. ಬಸವರಾಜ್ ಮನವಿ

    ಹಾಸನ: ದೇಶ ಅಭಿವೃದ್ಧಿಯಾಗಬೇಕಾದರೆ ರೈತರು ಮತ್ತು ಯೋಧರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಆ ಹಿನ್ನೆಲೆಯಲ್ಲಿ ನಾನು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಜಿಲ್ಲೆಯ ಜನರು ಹೆಚ್ಚಿನ ಮತ ನೀಡುವ ಮೂಲಕ ಭ್ರಷ್ಟಾಚಾರಮುಕ್ತ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸೈನಿಕ ಹಾಗೂ ಪಕ್ಷೇತರ ಅಭ್ಯರ್ಥಿ ಜೆ.ಡಿ. ಬಸವರಾಜ್ ಮನವಿ ಮಾಡಿದರು.
    ನಾನು ಸೈನಿಕನಾಗಿ ದೇಶ ಕಾಯುವಂತಹ ಪುಣ್ಯದ ಕೆಲಸವನ್ನ ಮಾಡಿದ್ದೇನೆ. ನಿಸ್ವಾರ್ಥ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗಿ ಜನರ ಸೇವೆ ಮಾಡಲು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಭಾರತ ಭವಿಷ್ಯದಲ್ಲಿ ಸುಭದ್ರವಾಗಬೇಕಾದರೆ ಭ್ರಷ್ಟಾಚಾರಮುಕ್ತ ಆಡಳಿತ ನೀಡಬೇಕು. ಆ ಹಿನ್ನೆಲೆಯಲ್ಲಿ ಯುವಕರು ಜಾಗೃತರಾಗಬೇಕಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಯುವಕರಲ್ಲಿ ನಾಯಕತ್ವ, ದೇಶಪ್ರೇಮ, ಸಮಾಜ ಸೇವೆಯ ಮನೋಭಾವನೆಯನ್ನು ಬೆಳೆಸಬೇಕು. ಅಲ್ಲದೆ ಸೇನೆಗೆ ಸೇರುವಂತಹ ಮಕ್ಕಳಿಗೆ ತರಬೇತಿ ಮತ್ತು ಹಾಸನದಲ್ಲಿ ಸೈನಿಕ ಶಾಲೆ ಮಾಡುವ ಕನಸು ಕಂಡಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಮಾಜಿ ಸೈನಿಕ ರಂಗನಾಥ್, ಕಾಳೇಗೌಡ, ಗೋವಿಂದೇಗೌಡ, ಮೋಹನ್ ರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts