More

    ಭಾರತ ದೇಶ ಅಧ್ಯಾತ್ಮದ ಜಗದ್ಗುರು

    ಕಮಲಾಪುರ: ಭಾರತ ಶರಣರು, ಸಂತರು ಹಾಗೂ ಮಹಾಯೋಗಿಗಳು ನಡೆದಾಡಿದ ಪುಣ್ಯಭೂಮಿ. ಇಡೀ ಜಗತ್ತಿಗೆ ಅಧ್ಯಾತ್ಮದ ಬಗ್ಗೆ ಹೇಳಿಕೊಟ್ಟ ಏಕೈಕ ದೇಶ ನಮ್ಮದು. ಅಂತೆಯೇ ಸ್ವಾಮಿ ವಿವೇಕಾನಂದರು ಭಾರತವನ್ನು `ಅಧ್ಯಾತ್ಮದ ಜಗದ್ಗುರು’ ಎಂದು ಕರೆದಿದ್ದಾರೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.

    ದಸ್ತಾಪುರದಲ್ಲಿ ಶ್ರೀ ಹನುಮಾನ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕಳಸಾರೋಹಣ, ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಸಮಸ್ತ ಮಾನವ ಕುಲ ಒಂದೇ ಆಗಿದೆ. ಜಾತಿ ಭೇದ ಮರೆತು ಎಲ್ಲರೂ ಸಮನ್ವಯತೆಯಿಂದ ಬದುಕಬೇಕು. ಉತ್ತಮ ಮಳೆಯಾಗಿ, ಹೆಚ್ಚಿನ ಆದಾಯ ಬಂದು ರೈತನ ಬದುಕು ಹಸನಾಗಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಎಂದರು.

    ಶ್ರೀನಿವಾಸ ಸರಡಗಿಯ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ, ಬಬಲಾದ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಹುಡಗಿಯ ಶ್ರೀ ವಿರೂಪಾಕ್ಷಯ್ಯ ಶಿವಾಚಾರ್ಯರು, ಚಿಂಚನಸೂರದ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು, ಅವರಾದನ ಶ್ರೀ ಮರುಳಸಿದ್ಧ ಶಿವಾಚಾರ್ಯರು, ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಸೋಂತದ ಶ್ರೀ ಶರಣ ಶಂಕರಲಿಂಗ ಮಹಾರಾಜರು, ಮಾಲಗತ್ತಿಯ ಶ್ರೀ ಚನ್ನಬಸವ ಶರಣರು, ಮಹಾಗಾಂವದ ಶ್ರೀ ವಿರೂಪಾಕ್ಷ ದೇವರು, ಖೇಳಗಿಯ ಶ್ರೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಿಜೆಪಿ ನಾಯಕಿ ಜಯಶ್ರೀ ಮತ್ತಿಮಡು, ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಹೊಳಕುಂದಾ ಗ್ರಾಪಂ ಅಧ್ಯಕ್ಷೆ ಭೀಮಬಾಯಿ ಹಣಮಂತರಾಯ, ಪ್ರಮುಖರಾದ ಶಿವಕುಮಾರ ಪಸಾರ್, ವೈಜನಾಥ ಪಂಡರಗಿ, ಗುರುನಾಥ ಪಂಡರಗಿ, ಶಾಂತವೀರ ಪಾಟೀಲ್, ಚೇತನ ಡಬರಾಬಾದ, ಸಿಪಿಐ ಶ್ರೀಮಂತ ಇಲ್ಲದ್, ಪಿಎಸ್ಐ ಹುಸೇನ್ ಭಾಷಾ ಇತರರಿದ್ದರು.

    ಜಗದ್ಗುರುಗಳಿಗೆ ಅದ್ದೂರಿ ಸ್ವಾಗತ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದಸ್ತಾಪುರ ಗ್ರಾಮಕ್ಕೆ ಆಗಮಿಸಿದ ಉಜ್ಜಯಿನಿ ಜಗದ್ಗುರುಗಳಿಗೆ ಭಕ್ತರು ಅದ್ದೂರಿ ಸ್ವಾಗತ ನೀಡಿದರು. ದಸ್ತಾಪುರ ಕ್ರಾಸ್ನಿಂದ ಗ್ರಾಮದವರೆಗೆ ತೆರೆದ ಸಾರೋಟಿನಲ್ಲಿ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರನ್ನು ಕೂರಿಸಿ ವೈಭವದಿಂದ ಗ್ರಾಮದವರೆಗೆ ಕರೆತಲಾಯಿತು. ಮುತ್ತೈದೆಯರು ಕುಂಭ- ಕಳಸ ಹೊತ್ತು ಹೆಜ್ಜೆ ಹಾಕಿದರು. ಡೊಳ್ಳು- ನಗಾರಿ ವಾದ್ಯಗಳು ಹಾಗೂ ಭಜನೆ ಗಮನ ಸೆಳೆಯಿತು. ಗ್ರಾಮ ಪ್ರವೇಶಿಸಿದ ಶ್ರೀಗಳನ್ನು ಬಳಿಕ ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ, ಪ್ರಮುಖ ಬೀದಿಗಳ ಮೂಲಕ ಅದ್ದೂರಿ ಮೆರವಣಿಗೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts