More

    ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಆಕ್ರೋಶ

    ಶ್ರೀರಂಗಪಟ್ಟಣ: ಎಲ್‌ಐಸಿ ಪ್ರತಿನಿಧಿಗಳ ಕಮಿಷನ್ ಹಾಗೂ ಪಾಲಿಸಿದಾರರ ಪ್ರೀಮಿಯಂ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಜಿಎಸ್‌ಟಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.


    ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಶ್ರೀರಂಗಪಟ್ಟಣ ಶಾಖೆ ಎದುರು ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಗುರುವಾರದಿಂದ 7 ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಕುರಿತು ದಕ್ಷಿಣ ಮಧ್ಯಮ ವಯಲದ ಉಪಾಧ್ಯಕ್ಷ ಸಿ.ಸ್ವಾಮಿಗೌಡ ಮಾತನಾಡಿದರು.


    ಪ್ರತಿನಿಧಿಗಳ ಗ್ರಾಚ್ಯುಟಿ ಹೆಚ್ಚಳ, ಅವಧಿ ವಿಮೆ ಹೆಚ್ಚಳ, ಎಲ್ಲ ಪ್ರತಿನಿಧಿಗಳಿಗೆ ವೈದ್ಯಕೀಯ ಸೌಲಭ್ಯ, ಪ್ರತಿನಿಧಿಗಳನ್ನು ವೃತ್ತಿಪರರು ಎಂದು ಗುರುತಿಸಿ ಕಲ್ಯಾಣ ನಿಧಿಗಳ ರಚನೆ ಜತೆಗೆ ಪಾಲಿಸಿದಾರರು ಹಾಗೂ ಪ್ರತಿನಿಧಿಗಳ ಕಮಿಷನ್ ಮೇಲೆ ವಿಧಿಸಿರುವ ಜಿಎಸ್‌ಟಿ ತೆರವುಗೊಳಿಸಿ ಪಿಂಚಣಿ ಯೋಜನೆಗೆ ಒಳಪಡಿಸಿ ಜೀವನ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ತಮ್ಮ ಬೇಡಿಕೆ ಈಡೇರಿಕೆಗೆ 7 ದಿನಗಳ ಕಾಲ ಹೋರಾಟ ಕೈಗೊಂಡಿರುವುದಾಗಿ ತಿಳಿಸಿದರು.


    ಸಂಘದ ಅಧ್ಯಕ್ಷರು ಬಳ್ಳಾರಿಗೌಡ, ಉಪಾಧ್ಯಕ್ಷ ಸಿದ್ದೇಗೌಡ, ದೇವರಾಜು, ಖಚಾಂಚಿ ನಂದೀಶ್, ಪ್ರತಿನಿಧಿಗಳಖು ನಜೀರಾ ಬೇಗಂ, ಡಿ.ಶ್ರೀನಿವಾಸ್, ಮಹೇಶ್ ಶ್ರೀಧರ್ ಆರ್.ಸಿ. ಪುಟ್ಟಸ್ವಾಮಿ, ಬಿ.ಮಹದೇವು, ವೈ.ಪಿ. ಶಿವಕುಮಾರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts