More

    ಭಾರತಕ್ಕೆ ವೈರಿಯಾದ ಭ್ರಷ್ಟಾಚಾರ ವಾಗ್ಮಿ ಎಚ್.ಬಿ.ಮಂಜುನಾಥ್ ವಿಷಾದ 

    ದಾವಣಗೆರೆ: ಪ್ರಜೆಗಳು ಹಕ್ಕುಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯವನ್ನು ಕರ್ತವ್ಯಗಳ ಪಾಲನೆಗೂ ನೀಡಿದಾಗ ಉತ್ತಮ ದೇಶವಾಗಲಿದೆ. ಭ್ರಷ್ಟಾಚಾರ ಎಂಬುದು ಸುರಾಜ್ಯ ಪರಿಕಲ್ಪನೆಗೆ ಕಡು ವೈರಿಯಾಗಿದೆ ಎಂದು ವಾಗ್ಮಿ ಎಚ್.ಬಿ.ಮಂಜುನಾಥ್ ವಿಷಾದಿಸಿದರು.
    ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯಿಂದ ನಗರದ ರಾಘವೇಂದ್ರ ಪಿಯು ಕಾಲೇಜಿನ ಸಭಾಂಗಣದಲ್ಲಿ ಸೋಮವಾರ, ಸ್ವರಾಜ್ಯ- ಸುರಾಜ್ಯ ಎಂಬ ವಿಷಯವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸ್ವಾತಂತ್ರೃ ಭಾರತವು ಸಂವಿಧಾನ ರಚನೆಯೊಂದಿಗೆ ಸ್ವರಾಜ್ಯವಾಗಿ 76 ವರ್ಷ ಕಳೆದರೂ ಉತ್ತಮ ಸ್ಥಿತಿಗೆ ತಲುಪಿಲ್ಲ ಎಂದು ಹೇಳಿದರು.
    ಭಾರತವೀಗ ವಿಶ್ವದ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು ಆಂತರಿಕವಾಗಿ ಸುರಾಜ್ಯವಾಗಲು ಪ್ರತಿ ಪ್ರಜೆಯೂ ತಮ್ಮ ಪಾತ್ರ ಹಾಗೂ ಕರ್ತವ್ಯದ ಬಗ್ಗೆ ಅರಿತು ನಡೆಯಬೇಕಿದೆ ಎಂದ ಅವರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾವಣಗೆರೆ ಪಾತ್ರ ಕುರಿತು ವಿವರಿಸಿದರು.
    ಕವಿ, ಲೇಖಕ ಮಹಾಂತೇಶ ನಿಟ್ಟೂರ್ ಮಾತನಾಡಿ ಭಾರತ ವಿವಿಧತೆಯಲ್ಲಿ ಐಕ್ಯತೆ ಹೊಂದಿದ ರಾಷ್ಟ್ರವಾಗಿದ್ದು ವಿಶ್ವದ ಅದ್ಭುತವಾಗಿದೆ. ಇತರ ದೇಶಗಳೇ ವಿಶ್ವಗುರು ಸ್ಥಾನದಲ್ಲಿ ನೋಡುತ್ತಿವೆ. ಇದು ಹೆಮ್ಮೆಯ ವಿಷಯ ಎಂದರು.
    ದಾವಣಗೆರೆ ಹಾಗೂ ವಿವಿಧ ಜಿಲ್ಲೆಗಳಿಂದ ಬಂದ ಕವಿ ಕವಯತ್ರಿಯರು ಸ್ವರಚಿತ ಕವನಗಳನ್ನು ವಾಚಿಸಿದರು. ಕವಯತ್ರಿ ವೀಣಾ ಕೃಷ್ಣಮೂರ್ತಿ, ತಾರೇಶ್, ಸುನೀಲ್, ಎಸ್.ಮಂಜುನಾಥ ಇತರರಿದ್ದರು.
    ಸಹನಾ ಪ್ರಾರ್ಥನೆ ಹಾಡಿದರು. ಪ್ರಶಾಂತ್ ಆಶಯ ನುಡಿ ವ್ಯಕ್ತಪಡಿಸಿದರು. ಅಮರೇಶ್ ವಂದಿಸಿದರು. ಸುನೀತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts