More

    ಭಾಗ್ಯಲಕ್ಷ್ಮೀ ಯೋಜನೆ ಲಾಭ ಪಡೆಯಿರಿ

    ಕಾಗವಾಡ, ಬೆಳಗಾವಿ: ಹೆಣ್ಣು ಭ್ರೂಣ ಹತ್ಯೆ ತಡೆಯಲು ಸರ್ಕಾರ ಭಾಗ್ಯಲಕ್ಷ್ಮೀ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತಂದಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

    ಸಮೀಪದ ಉಗಾರ ಖುರ್ದ ಫರೀದಖಾನವಾಡಿಯ ಕಟಗೇರಿ ಮಂಗಲ ಕಾರ್ಯಾಲಯದಲ್ಲಿ ಜಿಪಂ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾಡಳಿತ ಹಾಗೂ ಶಿಶು ಅಭಿವೃದ್ಧಿ ಯೋಜನೆ ಕಾಗವಾಡ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಪಾಸ್‌ಬುಕ್ ವಿತರಿಸಿ ಅವರು ಮಾತನಾಡಿದರು.

    ಕಾಗವಾಡ ವಲಯದಲ್ಲಿ 499 ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಪಾಸ್‌ಬುಕ್ ವಿತರಿಸಲಾಯಿತು. ಕಾಗವಾಡ ವಲಯದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ದೀಪಾವಳಿ ಹಬ್ಬದ ಅಂಗವಾಗಿ ಶ್ರೀಮಂತ ಪಾಟೀಲ ಫೌಂಡೇಷನ್ ವತಿಯಿಂದ ಸಿಹಿ ತಿಂಡಿ ಕಿಟ್ ವಿತರಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಜೀವಕುಮಾರ ಸದಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಬಿಜೆಪಿ ಕಾಗವಾಡ ಬ್ಲಾಕ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ರಾಜೇಂದ್ರ ಪೋತದಾರ, ಮಹಾದೇವ ಕಟಗೇರಿ, ಪ್ರಕಾಶ ಥೋರುಸೆ, ಪ್ರತಾಪ ಜತ್ರಾಟ, ರಾಜು ಪಾಟೀಲ, ಸುಜಯ ಪರಾಕಟೆ, ರಾಕೇಶ ಪಾಟೀಲ, ಸುಭಾಷ ಕುರಾಡೆ, ಲಕ್ಷ್ಮಣ ಕಟಗೇರಿ, ಜಿ.ಎಂ.ಸಡ್ಡಿ, ಮಹಾದೇವ ನಾಯಿಕ ವಲಯದ ಅಂಗನವಾಡಿ ಮೇಲ್ವಿಚಾರಕಿಯರು, ಶಿಕ್ಷಕಿಯರು, ಫಲಾನುಭವಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts