More

    ಭವಾನಿ ಅಕ್ಕ ನಾಳೆ ನನ್ನನ್ನು ತಮ್ಮ ಎಂದೂ ಕರೆಯಬಹುದು:ಪ್ರೀತಂ ಗೌಡ ಅಚ್ಚರಿಯ ಹೇಳಿಕೆ

    ಹಾಸನ : ಪ್ರೀತಂ ಗೌಡ ಕೆಲಸ ಮಾಡಿದ್ದಾನೆ ಅಂದರೆ ಜನರು ಆಶೀರ್ವಾದ ಮಾಡುತ್ತಾರೆ. ಯಾರು ಹತಾಷರಾಗಿದ್ದಾರೆ ಎಂಬುದನ್ನು ಜನಸಾಮಾನ್ಯರು ನೋಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ಅವರು ಹೇಳಿದರು.
    ಹಾಸನ ನಗರದಲ್ಲಿ ಗುರುವಾರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತದಾರರು ಯಾರ ಪರ ಇದ್ದಾರೆ ಎಂಬುವುದು ಮುಖ್ಯ. ಪ್ರಧಾನಿಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇರುವುದು ಒಂದೇ ವೋಟು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಯಾರ ಪರ ನಿಲ್ಲುತ್ತಾರೆ ಅವರು ಜನಪ್ರತಿನಿಧಿಯಾಗುತ್ತಾರೆ. ನನ್ನನ್ನು ಹಾಸನ ಬಿಟ್ಟು ಓಡಿಸುತ್ತೇನೆ ಎಂದು ಹೇಳಿ ಈಗ ನಾವು ಹಾಗೆ ಹೇಳಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಸಂಸದರು ಹೇಳಿರುವುದನ್ನು ಕೇಳಿಯೇ ನಾನು ಉಲ್ಲೇಖ ಮಾಡಿದ್ದೇನೆ. ಅವರು ಹಾಗೆ ಹೇಳಿಲ್ಲ ಅಂದರೆ ಸಂತೋಷ ಎಂದು ಮಾರ್ಮಿಕವಾಗಿ ಹೇಳಿದರು.
    ಸ್ವರೂಪ್ ನನ್ನ ಮಗ. ಅವನನ್ನು ಗೆಲ್ಲಿಸುವುದೆ ನನ್ನ ಗುರಿ ಎಂಬ ಭವಾನಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ಇಬ್ಬರು ಹೊಂದಾಣಿಕೆ ಮಾಡಿಕೊಂಡಿರುವುದು ಒಳ್ಳೆಯ ಬೆಳವಣಿಗೆ. 2024ಕ್ಕೆ ಅವರ ಮಗ ಎಂಪಿ ಕ್ಯಾಂಡೇಟ್ ಆಗುವುದರಿಂದ ಅವರು ಈ ರೀತಿ ಎಲ್ಲ ಸರ್ಕಸ್ ಮಾಡಬೇಕಾಗುತ್ತದೆ. ಅವರು ಈಗ ಪ್ರಚಾರ ಮಾಡುತ್ತಿರುವುದು ಈಗಿನ ಅಭ್ಯರ್ಥಿ ಗೆಲ್ಲಲಿ ಅಂತ ಅಲ್ಲ. 2024ರ ಲೋಕಸಭೆ ಚುನಾವಣೆಗೆ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಎಂದು ಹೇಳಿದರು.
    ಭವಾನಿ ರೇವಣ್ಣ ಅವರು ನಶೆಯಲ್ಲಿ ಮಾತನಾಡುತ್ತಾರೆ ಎಂಬ ಮಾತಿಗೆ ನೀವು ಈಗಲೂ ಬದ್ಧರಾ? ಎಂದು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಪ್ರೀತಂ ಗೌಡ, ಈಗ ಅವರು ಅಭ್ಯರ್ಥಿ ಅಲ್ಲ. ಅವರ ವಿಚಾರ ಈಗ ಬೇಡ. ಅವರನ್ನು ಭೇಟಿಯಾದಾಗ ವಿಶ್ವಾಸದಿಂದ ಮಾತನಾಡಿಸಿದ್ದೇನೆ. ಅವರು ಕೂಡ ವಿಶ್ವಾಸದಿಂದಲೇ ಮಾತನಾಡಿಸಿದ್ದಾರೆ. ಮತ್ತೆ ಭೇಟಿಯಾಗಿ ಮಾತಾಡುತ್ತೇನೆ. ಸ್ವರೂಪ್‌ನನ್ನು ಮಗ ಅಂದಿದ್ದಾರೆ. ನಾಳೆ ಪ್ರೀತಂಗೌಡನನ್ನು ತಮ್ಮ ಎಂದು ಕರೆದರೂ ಅಚ್ಚರಿಯಿಲ್ಲ. ಕಾರಣ ನಾನು ಅವರನ್ನು ಬಾಯಿ ತುಂಬಾ ಅಕ್ಕ ಅಂತೀನಿ. ಹಾಗಾಗಿ ಅಕ್ಕನ ಬಳಿ ಸಂಬಂಧ ಸುಧಾರಿಸಿಕೊಂಡು ಹೋಗೋಣ ಎಂದು ಅಚ್ಚರಿಯ ಹೇಳಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts