More

    ಭದ್ರಾವತಿ: ಸಂಗಮೇಶ್ವರನ ದರ್ಶನಕ್ಕೆ ನಸುಕಿನಿಂದಲೇ ಸರದಿ

    ಭದ್ರಾವತಿ: ಮಹಾಶಿವರಾತ್ರಿ ಅಂಗವಾಗಿ ಶನಿವಾರ ತಾಲೂಕಿನ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಹವನಗಳು ನೆರವೇರಿದವು. ಪಶ್ಚಿಮವಾಹಿನಿ ಭದ್ರೆಯ ಮಧ್ಯದಲ್ಲಿ ನೆಲೆಗೊಂಡಿರುವ ಶ್ರೀ ಸಂಗಮೇಶ್ವರಸ್ವಾಮಿ, ನಂದಿ, ನಾಗದೇವತೆಗೆ ಮುಂಜಾನೆ 4 ಗಂಟೆಯಿಂದ ರುದ್ರಾಭಿಷೇಕ, ನವಗ್ರಹಪೂಜೆ, ಹೋಮ ನೆರವೇರಿಸಲಾಯಿತು. ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.
    ಸಾವಿರಾರು ಭಕ್ತರು ನಸುಕಿನಲ್ಲೇ ಸರದಿಯಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಬಿಸಿಲು ಹೆಚ್ಚಾದಂತೆ ಭಕ್ತರ ದಾಹ ತೀರಿಸುವ ನಿಟ್ಟಿನಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಶಾಸಕ ಬಿ.ಕೆ.ಸಂಗಮೆಶ್ವರ್ ನೇತೃತ್ವದಲ್ಲಿ ಹಂಚಲಾಯಿತು. ಬಿ.ಕೆ.ಸಂಗಮೇಶ್ವರ ಕುಟುಂಬದವರು, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್, ಉಪಾಧ್ಯಕ್ಷ ಚನ್ನಪ್ಪ, ಅನುಪಮಾ ಚನ್ನೇಶ್, ಆರ್.ಮಹೇಶ್‌ಕುಮಾರ್, ಉದಯಕುಮಾರ್, ಹಾಲೇಶ್ ಇತರರು ದೇವರ ದರ್ಶನ ಪಡೆದರು.
    ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಬಂದ ಭಕ್ತರು ದರ್ಶನ ಪಡೆದು ಪುನೀತರಾದರು. ಭಕ್ತಿಗೀತೆ, ಯಕ್ಷಗಾನ ಕಾರ್ಯಕ್ರಮಗಳು ನೆರವೇರಿದವು. ಜನ್ನಾಪುರದ ಮಲ್ಲೇಶ್ವರ ದೇವಾಲಯದಲ್ಲಿ ಭಕ್ತರು ಶಿವಲಿಂಗಕ್ಕೆ ಹಾಲೆರೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಹುತ್ತಾ ಕಾಲನಿ ಭದ್ರೇಶ್ವರ, ಈಶ್ವರ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts