More

    ಭತ್ತ ಖರೀದಿ ನಿರ್ಲಕ್ಷೃ ವಿರೋಧಿಸಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಮಳವಳ್ಳಿ
    ಭತ್ತ ಖರೀದಿಗೆ ಸರ್ಕಾರ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿ ಭತ್ತ ಬೆಳೆ ಹೋರಾಟಗಾರರ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
    ಪಟ್ಟಣದಲ್ಲಿ ತೆರೆದಿರುವ ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸದೆ ಇರುವುದರಿಂದ ನೋಂದಣಿ ವಿಳಂಬವಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರು ದಿನಗಟ್ಟಲೆ ಖರೀದಿ ಕೇಂದ್ರದ ಮುಂದೆ ಕಾಯುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ಕೂಡಲೇ ಸಂಬಂಧಪಟ್ಟವರು ಖರೀದಿ ಕೇಂದ್ರದಲ್ಲಿನ ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡಲು ಕ್ರಮ ವಹಿಸುವ ಮೂಲಕ ತ್ವರಿತವಾಗಿ ನೋಂದಣಿ ಮಾಡಿಕೊಂಡು ರೈತರ ಬೆಳೆಗಳ ಖರೀದಿಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
    ಸಂಘಟನೆಯ ತಾಲೂಕು ಅಧ್ಯಕ್ಷ ಭರತ್ ರಾಜ್, ಕಾರ್ಯದರ್ಶಿ ಲಿಂಗರಾಜಮೂರ್ತಿ, ಮುಖಂಡರಾದ ಮಾಯಪ್ಪ, ಶಿವಣ್ಣ, ಚಿಕ್ಕಲಿಂಗೇಗೌಡ, ಮಾದೇಗೌಡ, ಚಂದ್ರು ಇದ್ದರು.
    ತಳಗವಾದಿಯಲ್ಲಿ ಧರಣಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಷೇರುದಾರರನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ತೆಗೆದು ಹಾಕಿರುವುದನ್ನು ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 8ನೇ ದಿನ ಪೂರೈಸಿದೆ.
    ಸ್ಥಳಕ್ಕೆ ಸಹಕಾರ ಇಲಾಖೆ ಸಿಡಿಒ, ಎಆರ್ ಭೇಟಿ ನೀಡಿ ಧರಣಿ ನಿರತರನ್ನು ಮನವೊಲಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು, ಮೇಲಧಿಕಾರಿಗಳಿಗೆ ವರದಿ ನೀಡುವ ಭರವಸೆ ನೀಡಿ ಅಧಿಕಾರಿಗಳು ತೆರಳಿದ್ದಾರೆ.
    ಮುಖಂಡರಾದ ಪ್ರಕಾಶ್, ಟಿ.ಎಲ್. ಕೃಷ್ಣೇಗೌಡ, ಆನಂದ್, ವಿಶ್ವ, ಸೋಮೇಗೌಡ, ರಮೇಶ್ ಗ್ರಾಮ ಪಂಚಾಯಿತಿ ಸದಸ್ಯರಾದ ಚೌಡಯ್ಯ ಇದ್ದರು.
    ಕಾಗೇಪುರದಲ್ಲೂ ಧರಣಿ: ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ವೇತನ ಸಂಬಂಧದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಟಾಸ್ಕ್‌ವರ್ಕ್ ದಿನಗೂಲಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 2ನೇ ದಿನ ಪೂರೈಸಿದೆ.
    ನೀರಾವರಿ ಇಲಾಖೆ ಇಂಜಿನಿಯರ್‌ಗಳು ನಡೆಸಿದ ಸಂಧಾನ ಕಾರ್ಯ ಶುಕ್ರವಾರವೂ ವಿಫಲವಾಗಿದೆ. ನೌಕರ ಮುಖಂಡರಾದ ಬೋರೇಗೌಡ, ಕೃಷ್ಣ, ಚನ್ನಮಲ್ಲೇಗೌಡ, ಬಸವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts