More

    ಭಗೀರಥ ಜೀವನ ಎಲ್ಲರಿಗೂ ಆದರ್ಶ

    ಗೋಕಾಕ: ರಾಜಋಷಿ ಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು. ನಾವೆಲ್ಲರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್​ ಡಾ.ಮೋಹನ ಭಸ್ಮೆ ಹೇಳಿದರು.

    ನಗರದ ತಹಸೀಲ್ದಾರ್​ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಜಋಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಭಗೀರಥರು ತೋರಿದ ಸಮಾಜಪರ ಕಾಳಜಿ, ಕಳಕಳಿ ಅನುಸರಿಸಬೇಕು. ಸತ್ಕಾರ್ಯಗಳಿಂದ ಜನರಿಗೆ ಒಳ್ಳೆಯದಾಗಬೇಕು. ಭೂಮಿಗೆ ಗಂಗೆಯನ್ನು ಕರೆತರುವಲ್ಲಿ ಕಠೋರ ತಪಸ್ಸು ಮಾಡಿದ ಭಗೀರಥರು ಸವಾಲುಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನನ್ನೇ ಒಲಿಸಿಕೊಂಡು ನೀರಿನ ಕೊರತೆ ನೀಗಿಸಿದರು ಎಂದರು.

    ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂದ ಉಪಾಧ್ಯ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೆನ್ನವರ, ಉಪ್ಪಾರ ಔದ್ಯೋಗಿಕ ಸಹಕಾರಿ ಸಂದ ಅಧ್ಯ ಮಾಯಪ್ಪ ತಹಸೀಲ್ದಾರ್​, ಮುಖಂಡರಾದ ಯಲ್ಲಪ್ಪ ಹೆಜ್ಜೆಗಾರ, ಸದಾಶಿವ ಗುದಗೋಳ, ಅಡಿವೆಪ್ಪ ರಾ ಬಿಲಕುಂದಿ, ಯಲ್ಲಪ್ಪ ಸುಳ್ಳನವರ, ರೇವಪ್ಪ ದುರದುಂಡಿ, ನಾಗರಾಜ ತಹಸೀಲ್ದಾರ್​, ಹಣಪತಿ ರಂಕಣಕೊಪ್ಪ, ಯಲ್ಲಪ್ಪ ಗೋಸಬಾಳ, ವೈ.ಕೆ.ಕೌಜಲಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts