More

    ಭಕ್ತಿಯಿಂದ ಗಣಪನ ಮೂರ್ತಿಗಳ ವಿಸರ್ಜನೆ

    ಧಾರವಾಡ: ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು 5ನೇ ದಿನವಾದ ಬುಧವಾರ ಶ್ರದ್ಧಾ, ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು. ಕರೊನಾ ಹಾವಳಿ ಮಧ್ಯೆಯೂ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಿತ್ತು. ಆದರೆ, ಬಹುತೇಕ ಬಡಾವಣೆಗಳಲ್ಲಿ ಚತುರ್ಥಿ ದಿನ ಪ್ರತಿಷ್ಠಾಪನೆ ಮಾಡಿ, ಅದೇ ದಿನ ವಿಸರ್ಜನೆ ಸಹ ಮಾಡಿದ್ದಾರೆ. ಇನ್ನು ಮನೆಗಳಲ್ಲಿ ಸ್ಥಾಪಿಸಿರುವ ಗಣೇಶ ಮೂರ್ತಿಗಳನ್ನು ಕೆಲವರು ಮನೆ ಆವರಣದಲ್ಲಿ ಬಕೆಟ್​ನಲ್ಲೇ ವಿಸರ್ಜನೆ ಮಾಡಿದರೆ, ಕೆಲವರು ಸಂಚಾರಿ ಟ್ಯಾಂಕ್​ನಲ್ಲಿ ವಿಸರ್ಜನೆ ಮಾಡಿದರು. ಸಾರ್ವಜನಿಕ ಸೇರಿ ಮನೆಯಲ್ಲಿನ ಗಣೇಶ ಮೂರ್ತಿಗಳನ್ನು ಅತ್ಯಂತ ಸರಳವಾಗಿ, ಪಟಾಕಿ, ಡಿಜೆ ಸದ್ದಿಲ್ಲದೆ ವಿಸರ್ಜನೆ ಮಾಡಿದ್ದು ವಿಶೇಷ.

    ಇನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಹಾಗೂ ರೋಟರಿ ಕ್ಲಬ್, ಸಿವಿಲ್ ಡಿಫೆನ್ಸ್ ಹಾಗೂ ಇಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ವ್ಯವಸ್ಥೆ ಮಾಡಿದ್ದ ತಾತ್ಕಾಲಿಕ ಸಂಚಾರಿ ವಾಹನಗಳು ಗಾಂಧಿನಗರ, ಮಾಳಮಡ್ಡಿ, ರಾಯರಮಠ, ಹೊಸಯಲ್ಲಾಪುರ, ಶ್ರೀನಗರ, ಸಪ್ತಾಪುರ, ಜಯನಗರ, ಕೆಸಿಡಿ ಕಾಲೇಜು, ಸಿ.ಬಿ.ನಗರ, ಮರಾಠಾ ಕಾಲನಿ ಸೇರಿ ಇತರ ಪ್ರದೇಶಗಳಲ್ಲಿ ಸಂಜೆ 5 ರಿಂದ ರಾತ್ರಿ 10.30ರವರೆಗೂ ಸಂಚಾರ ನಡೆಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts